ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ವಯಸ್ಕರ ಬಿಸಿಜಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಡಾ.ಅಲೀಂ ಪಾಶಾ ಮಾತನಾಡಿದರು. ಸಿಬ್ಬಂದಿ ಇದ್ದರು. 
ಜಿಲ್ಲೆ

ಬೆಳಚಲವಾಡಿಯಲ್ಲಿ ಬಿಸಿಜಿ ಲಸಿಕಾ ಅಭಿಯಾನ

ಲೋಕೇಶ್ ಮನು. ಡಿ

ಗುಂಡ್ಲುಪೇಟೆ: ಆರೋಗ್ಯ ಇಲಾಖೆ ಮಂಗಳವಾರ ತಾಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬೆಳಚಲವಾಡಿ ಗ್ರಾಮದಲ್ಲಿ ವಯಸ್ಕರ ಬಿಸಿಜಿ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಅಲಿಂ ಪಾಷಾ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರ ಬೇಗೂರು ವ್ಯಾಪ್ತಿಯ ಒಟ್ಟು 2,780 ಜನರಿಗೆ ಬಿಸಿಜಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಕ್ಷಯ ಮುಕ್ತ ಗ್ರಾಮ ನಿರ್ಮಿಸಲು ಈ ಅಭಿಯಾನ ಆಯೋಜಿಸಲಾಗಿದೆ. 60 ವರ್ಷದ ಮೇಲ್ಪಟ್ಟವರು, ಅಪೌಷ್ಟಿಕ ವ್ಯಕ್ತಿಗಳು. ಮಧುಮೇಹ ಹೊಂದಿರುವ ವ್ಯಕ್ತಿಗಳು ಈ ಲಸಿಕೆಗೆ ಪಡೆಯಬಹುದು ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸೋನಾ, ಜಯಶೀಲಾ. ಪುಷ್ಪಲತಾ, ಆಶಾ ಕಾರ್ಯಕರ್ತೆಯರು ಇದ್ದರು.