ಬೆಳಗಾವಿ:ಮೂಲಭೂತ ಸೌಕರ್ಯ ಇಲ್ಲದೆ ಆರ್ಥಿಕವಾಗಿ ತತ್ತರಿಸಿ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಏರಿಕೆ ಮತ್ತಷ್ಟು ಸಂಕಷ್ಟ ಕ್ಕೆ ತಳ್ಳಿದೆ. ಒಂದು ವಾರದಲ್ಲಿ ವಿದ್ಯುತ್ ಬಿಲ್ ದರ ಇಳಿಕೆ ಮಾಡಿದ್ದರೆ ಕೈಗಾರಿಕೆಗಳನ್ನು ಬಂದ್ ಉಗ್ರ ಹೋರಾಟ ನಡೆಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಹೇಮೇಂದ್ರ ಪೋರವಲ ಎಚ್ಚರಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವಿರೋಧ ಇಲ್ಲ.ಆದರೆ, ತೆರಿಗೆ ಕಟ್ಟುತ್ತಿರುವ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಇದೀಗ ಏಕಾಏಕಿ ವಿದ್ಯುತ್ ಬಿಲ್ ಹೆಚ್ಚಿಸಿದರೆ ನಾವೆಲ್ಲಾ ಕೈಗಾರಿಕೆ ಗಳನ್ನು ಬಂದ್ ಮಾಡಿ ಮನೆಯಲ್ಲಿರುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಒಂದು ವಾರದ ಒಳಗಾಗಿ ಸರ್ಕಾರ ವಿದ್ಯಜತ್ ಬಿಲ್ ದರ ಇಳಿಕೆ ಮಾಡಲು ಕ್ರಮವಹಿಸಬೇಕು.ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಜೂ.13ರಂದು ಸಾಂಕೇತಿಕ ಧರಣಿ ನಡೆಸಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಹನ ಜವಳಿ, ಡಾ. ರಾಜಶೇಖರ ಪಾಟೀಲ, ಆನಂದ ದೇಸಾಯಿ, ರಾಮ ಬಂಡಾರಿ, ಮಹಾದೇವ ಚೌಗುಲೆ, ದಯನಾಂದ ನೇತಲಕರ ಇತರರಿದ್ದರು.