ಜಿಲ್ಲೆ

ಮಂಡ್ಯದ ರೈತರೊಂದಿಗೆ ರಾಗಿ ಬಿತ್ತನೆ ಮಾಡಿದ ಬಿ.ಸಿ.ಪಾಟೀಲ್​

Mandara

ಮಂಡ್ಯ: ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್​ ಅವರು ಇಂದು ತಮ್ಮ 64ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಹುಟ್ಟಿದ ದಿನವನ್ನು ಮಂಡ್ಯದ ರೈತರೊಂದಿಗೆ 'ರೈತರೊಂದಿಗೆ ಒಂದು ದಿನ' ಎನ್ನುವ ವಿಶೇಷ ಥೀಮ್​ನೊಂದಿಗೆ ಆಚರಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮಡುವಿನಕೋಡಿ ಗ್ರಾಮದ ರೈತರನ್ನು ಭೇಟಿ ಮಾಡಿದ ಸಚಿವ, ಅವರೊಂದಿಗೆ ರಾಗಿ ಬಿತ್ತನೆ ಮಾಡಿದ್ದಾರೆ. ಟ್ರ್ಯಾಕ್ಟರ್​ ಚಾಲಿತ ಯಾಂತ್ರಿಕೃತ ರಾಗಿ ಬಿತ್ತನೆಗೆ ಚಾಲನೆ ನೀಡಿದರು. ಸ್ವತಃ ತಾವೇ ಟ್ರ್ಯಾಕ್ಟರ್​ ಮೇಲೆ ಕುಳಿತು ರಾಗಿ ಬಿತ್ತನೆ ಮಾಡಿದ್ದಾರೆ. ಅದರ ಜತೆಯಲ್ಲಿ ಯಾಂತ್ರಿಕೃತ ಕಬ್ಬು ನಾಟಿ ಮಾಡುವ ವಿಧಾನಕ್ಕೂ ಚಾಲನೆ ನೀಡಲಾಗಿದೆ.

ಕಾರ್ಯಕ್ರಮದ ನಂತರ ರೈತರೊಂದಿಗೆ ಮಾತನಾಡಿದ ಅವರು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಎಲ್ಲ ಸಮ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.