ಜಿಲ್ಲೆ

ಬಿಬಿಎಂಪಿ 3 ಅಥವಾ 5 ಪಾಲಿಕೆಯಾಗಿ ವಿಭಜನೆ: ಸದ್ಯದಲ್ಲೇ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ "ಗ್ರೇಟರ್​ ಬೆಂಗಳೂರು ಪ್ರದೇಶ'(ಜಿಬಿಎ) ಜಾರಿಗೆ ಒಪ್ಪಿಗೆ ಕೊಟ್ಟಿರುವ ಬೆನ್ನಲ್ಲೇ ದೇಶದ 4ನೇ ಅತಿದೊಡ್ಡ ಮಹಾನಗರ ಪಾಲಿಕೆವೆಂದು ಖ್ಯಾತಿ ಹೊಂದಿರುವ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ), ಮೇ 15ರಿಂದ ಅಸ್ತಿತ್ವ ಕಳೆದುಕೊಳ್ಳಲಿದೆ.

ಇನ್ನುಮುಂದೆ ಬಿಬಿಎಂಪಿ ""ಗ್ರೇಟರ್​ ಬೆಂಗಳೂರು ಪ್ರದೇಶ'ವಾಗಿ ಪರಿವರ್ತನೆಯಾಗಲಿದೆ. ಇದಕ್ಕೆ ಪೂರಕವಾಗಿ ಅಧಿಸೂಚನೆ ಹೊರಡಿಸಲು, ಗ್ರೇಟರ್​ ಬೆಂಗಳೂರು ಆಡಳಿತ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಅಂತಿಮ ದಿನಾಂಕವನ್ನು ನಿಗದಪಡಿಸಿದ್ದು, ಮೇ 15ರಿಂದ ಅಧಿಸೂಚನೆ ಮೂಲಕ ಗ್ರೇಟರ್​ ಬೆಂಗಳೂರು ಆಡಳಿತ ಕಾಯ್ದೆ ಅನುಷ್ಠಾನಗೊಳ್ಳಲಿದೆ.

ಗ್ರೇಟರ್​ ಬೆಂಗಳೂರು ಆಡಳಿತ ಕಾಯ್ದೆ ಅನ್ವಯ ಬಿಬಿಎಂಪಿಯನ್ನು 3 ಅಥವಾ 5 ಪಾಲಿಕೆಯನ್ನಾಗಿ ವಿಗಂಡಿಸಲಾಗುತ್ತಿದೆ. ಈ ಕುರಿತು ಸದ್ಯದಲ್ಲೇ ನಗರಾಭಿವೃದ್ಧಿ ಇಲಾಖೆಯಿಂದ ಆದೇಶ ಹೊರ ಬೀಳಲಿದೆ. ರಾಜಧಾನಿಯಲ್ಲಿ ಒಟ್ಟು 27 ವಿಧಾನಸಭಾ ಕ್ಷೇತ್ರಗಳಲ್ಲಿ 224 ವಾರ್ಡ್​ಗಳಿವೆ. ಪಾಲಿಕೆ ಸದಸ್ಯರ ಆಡಳಿತ ಅವಧಿ 2020ರ ಸೆ.10ಕ್ಕೆ ಕೊನೆಗೊಂಡು 5 ವರ್ಷ ಗತಿಸಿದೆ.

ರಾಜಧಾನಿಗೆ ಉತ್ತಮ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಲಿ ಬಿಬಿಎಂಪಿಯನ್ನು ವಿಭಜಿಸಿ ಗರಿಷ್ಠ 7 ಹೊಸ ಪಾಲಿಕೆ ರಚಿಸುವ ಪ್ರಧಾನ ಅಂಶ ಕಾಯ್ದೆಯಲ್ಲಿದೆ. ರಾಜಧಾನಿ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆಗಾಗಿ ಇಂಥದ್ದೊಂದು ಕಾಯ್ದೆ ಅಗತ್ಯವಿತ್ತು. ಜನಸ್ನೇಹಿ ಆಡಳಿತ ನೀಡಲು,ಆರ್ಥಿಕ ಸಂಪನ್ಮೂಲ ಕ್ರೋಡಿಕರಣ, ಸಮರ್ಪಕ ಬಳಕೆ, ಅಭಿವೃದ್ಧಿಗೆ ವೇಗ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಅಸಾಧಾರಣ ವೇಗದಲ್ಲಿ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಬಿಬಿಎಂಪಿಯನ್ನು ವಿಂಗಡಿಸಲಾಗುತ್ತಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಇದನ್ನಾಧರಿಸಿ ಹೊಸದಾಗಿ 3 ಅಥವಾ 5 ಪಾಲಿಕೆ ರಚನೆಯಾಗಲಿದೆ.

"ಗ್ರೇಟರ್​ ಬೆಂಗಳೂರು ಪ್ರದೇಶ'ಕ್ಕೆ ಹಾರೋಹಳ್ಳಿ?

ಮೇ 15ರಿಂದ ಬಿಬಿಎಂಪಿ ವ್ಯಾಪ್ತಿ ಮಾತ್ರ "ಗ್ರೇಟರ್​ ಬೆಂಗಳೂರು ಪ್ರದೇಶ' ಆಗಲಿದ್ದು, ನಂತರ ದಿನಗಳಲ್ಲಿ ಇದರ ವ್ಯಾಪ್ತಿ ಹಿಗ್ಗಳಿದೆ. ತಲಾ 125 ವಾರ್ಡ್​ಗಳ ಒಳಗೊಂಡ ಮೂರು ನಗರ ಪಾಲಿಕೆಗಳನ್ನು ರಚಿಸುವ ಆಲೋಚನೆ ಇದೆ. ಅಲ್ಲದೆ, ಇದನ್ನು 5 ನಗರ ಪಾಲಿಕೆಗಳ ರಚಿಸುವ ಬಗ್ಗೆ ಯೋಚಿಸಲಾಗುತ್ತಿದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್​ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಕೊಡು, ಕಗ್ಗಲಿಪುರ, ಹಾರೋಹಳ್ಳಿಯನ್ನು "ಗ್ರೇಟರ್​ ಬೆಂಗಳೂರು ಪ್ರದೇಶ'ಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲಿ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು "ಬೆಂಗಳೂರು' ಎಂದೇ ಆರಂಭವಾಗಲಿದೆ. "ಬೆಂಗಳೂರು ದಣ ನಗರ ಪಾಲಿಕೆ', "ಬೆಂಗಳೂರು ಉತ್ತರ ನಗರ ಪಾಲಿಕೆ' ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆ' ಎಂದು ಹೆಸರು ಇಡಲಿದ್ದಾರೆ. ಒಂದು ವೇಳೆ ವ್ಯಾಪ್ತಿ ಹಿಗ್ಗಿದ್ದರೆ 3 ಅಥವಾ 5 ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎನ್ನಲಾಗಿದೆ.