ಜಿಲ್ಲೆ

ಬಿಬಿಎಂಪಿ ಶಾಲಾ-ಕಾಲೇಜು ದಾಖಲಾತಿ ಅವಧಿ ವಿಸ್ತರಣೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಜು.31ರವರೆಗೂ ವಿಸ್ತರಿಸಲಾಗದೆ.

2025-26ನೇ ಶೈಕ್ಷಣಿಕ ಸಾಲಿಗೆ ಆಯಾ ಶಾಲಾ-ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಕಳೆದ ವಾರ ಕೊನೆಗೊಂಡಿತ್ತು. ಸಾರ್ವಜನಿಕರ ಮನವಿಯ ಮೇರೆಗೆ ಪಾಲಿಕೆಯ ಶಿಶುವಿಹಾರ (ಎಲ್‌ಕೆಜಿ/ಯುಕೆಜಿ) ದಿಂದ 10ನೇ ತರಗತಿಯವರೆಗೂ ದಾಖಲಾತಿ ಅವಧಿಯನ್ನು ಮುಂದುವರಿಸಲಾಗುತ್ತದೆ.

2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುರ್ತ್ತೀರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಪ್ರಥಮ ಪಿಯುಸಿಗೆ ದಾಖಲಾತಿಯನ್ನು ಪಡೆಯಬಹುದು ಎಂದು ಪಾಲಿಕೆಯ ವಿದ್ಯಾ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ಮುನಿಶಾಮಪ್ಪ ತಿಳಿಸಿದ್ದಾರೆ.