ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಚಾಲುಕ್ಯ ವೃತ್ತದ ಸ್ವರೂಪ ಬದಲಾಗಲಿದೆ. ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಕೆಲವು ದಿನಗಳ ಹಿಂದೆ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದರು. ಈಗ ಚಾಲುಕ್ಯ ವೃತ್ತದ ಬದಲಾಗಲಿರುವ ಸ್ವರೂಪದ ನೀಲಿ ನಕ್ಷೆಯನ್ನು ಅವರು ಇಂದು ಸಂಜೆ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನ ಚಾಲುಕ್ಯ ವೃತ್ತ ಸೇರಿ 35 ಜಂಕ್ಷನ್ಗಳ ನೋಟ ಮತ್ತು ಸಂಚಾರ ಅನುಭವವನ್ನು ಸುಗಮಗೊಳಿಸುವ ಸಲುವಾಗಿ ಬಿಬಿಎಂಪಿ ಬೃಹತ್ ಯೋಜನೆಯೊಂದನ್ನು ಅಂತಿಮಗೊಳಿಸಿದೆ. ಇದರ ಅಂದಾಜು ವೆಚ್ಚ 100 ಕೋಟಿ ರೂಪಾಯಿ ಆಗಿರಲಿದೆ ಎಂದು ಮೇಯರ್ ವಿವರಿಸಿದ್ದಾರೆ.
ಈ ಪೈಕಿ ಚಾಲುಕ್ಯ ಸರ್ಕಲ್ ನ ಸುಧಾರಣೆಗೆ ಮೂರು ಕೋಟಿ ರೂಪಾಯಿ ಮೀಸಲಿಡಲು ತೀರ್ಮಾನಿಸಲಾಗಿದೆ. ಈ ಯೋಜನೆ ಆರಂಭದ ಪ್ರಾಜೆಕ್ಟ್ ಇದುವೇ ಆಗಿದ್ದು, ಶೀಘ್ರವೇ ಚಾಲನೆ ಸಿಗಲಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಈ ಪ್ರಸ್ತಾವನೆ ಈ ಸಲದ ಬಜೆಟ್ನಲ್ಲಿ ಒಳಗೊಂಡಿರಲಿದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
ಮೂವತ್ತೈದು ಜಂಕ್ಷನ್ಗಳು ಇಂತಿವೆ: ಚಾಲುಕ್ಯ ಸರ್ಕಲ್, ಅನಿಲ್ ಕುಂಬ್ಳೆ ಸರ್ಕಲ್, ಟ್ರಿನಿಟಿ ಸರ್ಕಲ್, ಲಾಲ್ಬಾಗ್ ವೆಸ್ಟ್ಗೇಟ್ ಜಂಕ್ಷನ್, ಸುರಂಜನ್ ದಾಸ್ ರಸ್ತೆ ಮತ್ತು ಬಿಇಎಂಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಮದರ್ ತೆರೇಸಾ ಮತ್ತು ಓಲ್ಡ್ ರೇಸ್ ಕೋರ್ಸ್ ರೋಡ್ ಜಂಕ್ಷನ್, ಕೃಪಾನಿಧಿ ಕಾಲೇಜು-ಸರ್ಜಾಪುರ ರಸ್ತೆ ಜಂಕ್ಷನ್, ಟಿ.ಸಿ.ಎಂ ರಾಯನ್ ರಸ್ತೆ ಮತ್ತು ಬಿನ್ನಿ ಮಿಲ್ ರಸ್ತೆ ಜಂಕ್ಷನ್, ಡಾ.ರಾಜ್ ಕುಮಾರ್ ರೋಡ್- ಮಾಗಡಿ ರೋಡ್ ಜಂಕ್ಷನ್, ಡಾ.ರಾಜ್ ಕುಮಾರ್ ರೋಡ್-ನವರಂಗ್ ಥಿಯೇಟರ್ ಜಂಕ್ಷನ್, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಜಂಕ್ಷನ್, ರಾಜಾಜಿನಗರ ಇಎಸ್ಐ ಆಸ್ಪತ್ರೆ ಜಂಕ್ಷನ್, ಮೋದಿ ಆಸ್ಪತ್ರೆ ಜಂಕ್ಷನ್, ಕೆ.ಜಿ.ರಸ್ತೆ ಕೆಂಪೇಗೌಡ ಸರ್ಕಲ್ ಜಂಕ್ಷನ್, ಕೆ.ಜಿ.ರಸ್ತೆ ಸಾಗರ್ ಥಿಯೇಟರ್ ಜಂಕ್ಷನ್, ಧನ್ವಂತರಿ ರಸ್ತೆ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಜಂಕ್ಷನ್, ಸಿ.ವಿ.ರಾಮನ್ ರೋಡ್- ಎಂ.ಎಸ್.ರಾಮಯ್ಯ ರೋಡ್ ಜಂಕ್ಷನ್, ಎಂ.ಎಸ್.ರಾಮಯ್ಯ- ಮತ್ತಿಕೆರೆ ಜಂಕ್ಷನ್, ಪ್ಯಾಲೇಸ್ ರೋಡ್-ಎಂ.ವಿ.ಜಯರಾಮನ್ ರೋಡ್ ಜಂಕ್ಷನ್, ಎಂ.ಎಂ.ರೋಡ್-ಟ್ಯಾನೆರಿ ರೋಡ್ ಜಂಕ್ಷನ್, ತರಳಬಾಳು ಜಂಕ್ಷನ್, ಕಮ್ಮನಹಳ್ಳಿ ಸರ್ಕಲ್ ಜಂಕ್ಷನ್, ಕಮ್ಮನಹಳ್ಳಿ ಮೇನ್ ರೋಡ್ - ಮರಿಯಪ್ಪ ಸರ್ಕಲ್ ಜಂಕ್ಷನ್, ಬಾಣಸವಾಡಿ ಮೇನ್ ರೋಡ್- ಏಳನೇ ಮುಖ್ಯರಸ್ತೆ ಜಂಕ್ಷನ್, ಬಾಣಸವಾಡಿ ಮೇನ್ ರೋಡ್- 100 ಫೀಟ್ ರೋಡ್ ಜಂಕ್ಷನ್, ಕೋಲ್ಸ್ ರೋಡ್-ಮಸೀದಿ ರಸ್ತೆ ಜಂಕ್ಷನ್, ಪಾಟೆರಿ ರೋಡ್- ಕೂಕ್ಸನ್ ರೋಡ್ ಜಂಕ್ಷನ್, ನಾಗವಾರ ಮೇನ್ ರೋಡ್- ಗೋವಿಂದಪುರ ರೋಡ್ ಜಂಕ್ಷನ್, ಬಿಟಿಎಸ್ ಜಂಕ್ಷನ್, ಮಿನರ್ವ ಸರ್ಕಲ್, ಬಿಎಂಸಿ ಜಂಕ್ಷನ್, ಶಿವಶಂಕರ ರಾವ್ ರೋಡ್- ಕೆಆರ್ ರೋಡ್ ಜಂಕ್ಷನ್, ಯಡಿಯೂರು ಸರ್ಕಲ್-ಕನಕಪುರ ರೋಡ್ ಜಂಕ್ಷನ್, ವಿದ್ಯಾಪೀಠ ಸರ್ಕಲ್.