ಜಿಲ್ಲೆ

ಬಿಬಿಎಂಪಿಯಿಂದ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿಯ ಹವಾಮಾನ ಕ್ರಿಯಾ ಕೋಶದಲ್ಲಿ (ಸಿಎಸಿ) ಹವಾಮಾನ ಬದಲಾವಣೆ ಹಾಗೂ ನಗರ ಆಡಳಿತ ಕುರಿತು ಆಸಕ್ತಿ ಹೊಂದಿರುವ ವೃತ್ತಿಪರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಫೆಲೋ- ಎಂಇಆರ್, ಹವಾಮಾನ ಆಯವ್ಯಯ ಮತ್ತು ಸಲಹೆಗಾರ - ‘ಸಂವಹನ ಮತ್ತು ಪ್ರಚಾರ’ ಈ ಎರಡು ಹುದ್ದೆಗಳ ಫೆಲೋ ಅವಧಿ 12 ತಿಂಗಳ ಆಗಿರುತ್ತದೆ. ಜತೆಗೆ ಗೌರವಧನವನ್ನೂ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಹವಾಮಾನ ಕ್ರಿಯಾ ಕೋಶ ತಂಡದೊಂದಿಗೆ ಕೆಲಸ ಮಾಡುವುದರ ಜತೆಗೆ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ (ಬಿಸಿಎಪಿ) ಜಾರಿಗೆ ಕೊಡುಗೆ ನೀಡಬಹುದಾಗಿದೆ.

ಆಸಕ್ತರು ಪಾಲಿಕೆ ವೆಬ್​​ಸೈಟ್​​ ಮೂಲಕ ಅರ್ಜಿ ಸಲ್ಲಿಸಬಹುದು. ವಿವರವಾದ ಮಾಹಿತಿ ಮತ್ತು ಮಾರ್ಗಸೂಚಿಗೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏ.30, ಆಯ್ಕೆಯಾದ ಅಭ್ಯರ್ಥಿಗಳು ಮೇ 15ರಿಂದ ಕೆಲಸ ಆರಂಭಿಸಬಹುದಾಗಿದೆ ಎಂದು ಪಾಲಿಕೆಯ ಹವಾಮಾನ ಕ್ರಿಯಾ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ.