ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿಗಳಲ್ಲಿ 10 ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಗುರುವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಎಂ. ಗೌತಮ್ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಕಾರ್ಯ ನೆರವೇರಿಸಿದರು.
ನಾಮಪತ್ರ ಸಲ್ಲಿಕೆ ಹಾಗೂ ಹಿಂಪಡೆಯಲು ತಲಾ 1 ನಿಮಿಷ ಅವಕಾಶ ನೀಡಲಾಗಿತ್ತು. 10 ಸಮಿತಿ ಗಳಿಂದ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಘೋಷಿಸಲಾಯಿತು. ಆಯ್ಕೆಯಾದವರಲ್ಲಿ ನಾಲ್ವರು ಮಹಿಳೆಯರಿದ್ದಾರೆ. ತೋಟಗಾರಿಕೆ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಗಳಲ್ಲಿ ತಲಾ 10 ಸದಸ್ಯರಿದ್ದು, ಇನ್ನೊಬ್ಬ ಸದಸ್ಯರ ಆಯ್ಕೆಬಾಕಿ ಇದೆ. 11 ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡ ನಂತರವೇ ಆ ಸಮಿತಿಗಳ ಅಧ್ಯಕ್ಷರ ಆಯ್ಕೆನಡೆಯಲಿದೆ. ತೋಟಗಾರಿಕೆ ಸಮಿತಿಗೆ ಉಮಾ ದೇವಿ ಹಾಗೂ ಲೆಕ್ಕಪತ್ರ ಸಮಿತಿಗೆ ಮಮತಾ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ಸ್ಥಾಯಿ ಸಮಿತಿಗಳ ಚುಕ್ಕಾಣಿ ಹಿಡಿದವರು
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್. ಶ್ರೀನಿವಾಸ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ- ಮಂಜುನಾಥರಾಜು, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ- ಆಶಾ ಸುರೇಶ್, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಮೋಹನ್ಕುಮಾರ್, ವಾರ್ಡ್ ಮಟ್ಟದ ಸಾರ್ವಜನಿಕರ ಕಾಮಗಾರಿ ಸ್ಥಾಯಿ ಸಮಿತಿ- ಜಿ.ಕೆ. ವೆಂಕಟೇಶ್, ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳಾ ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಹನುಮಂತಯ್ಯ, ಅಪೀಲುಗಳ ಸ್ಥಾಯಿ ಸಮಿತಿ- ಸಿ.ಆರ್. ಲಕ್ಷ್ಮೀನಾರಾಯಣ್, ಮಾರುಕಟ್ಟೆ ಸಮಿತಿ- ಪದ್ಮಾವತಿ ಶ್ರೀನಿವಾಸ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಮಿತಿ- ಅರುಣಾ ರವಿ.
ಪಾಲಿಕೆಯ 12 ಸ್ಥಾಯಿ ಸಮಿತಿಗಳಲ್ಲಿ ಹತ್ತು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಲೆಕ್ಕಪತ್ರ ಮತ್ತು ತೋಟಗಾರಿಕಾ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಿದ್ದು, ಚುನಾವಣೆ ಮುಂದೂಡಲಾಗಿದೆ. ನಿಯಮಾನುಸಾರ ಚುನಾವಣಾ ಪ್ರಕ್ರಿಯೆ ನಡೆದ ಬಳಿಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. | ಎಂ. ಗೌತಮ್ ಕುಮಾರ್ ಮೇಯರ್