ಜಿಲ್ಲೆ

ಬಿಎಂಪಿಗೆ ಪ್ರತ್ಯೇಕ ಮಕ್ಕಳ ತಜ್ಞರ ಸಲಹಾ ಸಮಿತಿ: ಸದಸ್ಯರ ಪಟ್ಟಿ ಬಿಡುಗಡೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಸಲುವಾಗಿ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತ ಅಧ್ಯಕ್ಷತೆಯಲ್ಲಿ 14 ಸದಸ್ಯರನ್ನು ಒಳಗೊಂಡ ಮಕ್ಕಳ ತಜ್ಞರ ಸಮಿತಿ ರಚಿಸಲಾಗಿದೆ.

ಈ ಸಮಿತಿಯೊಂದಿಗೆ ಸೋಂಕು ನಿಯಂತ್ರಣದ ಕುರಿತು ಚರ್ಚೆ, ನಿರ್ದೇಶನ ಪಡೆಯಲು ಹಾಗೂ ಮೇಲ್ವಿಚಾರಣಾ ಕ್ರಮಗಳ ಬಗ್ಗೆ ಸಲಹೆ ಪಡೆಯಲಾಗುವುದು. ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾರೆ. ಉಳಿದಂತೆ ಐವರು ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞರು ಹಾಗೂ ಏಳು ಮಂದಿ ಬಿಬಿಎಂಪಿ ಆಸ್ಪತ್ರೆಗಳ ಮಕ್ಕಳ ತಜ್ಞರು ಸಮಿತಿಯಲ್ಲಿದ್ದಾರೆ.

ಸಮಿತಿಯಲ್ಲಿರುವ ಸದಸ್ಯರು:

* ಡಾ. ಸಂಜಯ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ.

* ಡಾ. ಮಲ್ಲಿಕಾರ್ಜುನ್, ಇಂಡಿಯನ್ ಅಕಾಡೆಮಿ ಆ್ ಪೀಡಿಯಾಟ್ರಿಕ್ಸ್ ಅಧ್ಯಕ್ಷ

* ಡಾ. ರಕ್ಷಯ್ ಶೆಟ್ಟಿ, ರೈನ್‌ಬೋ ಮಕ್ಕಳ ಆಸ್ಪತ್ರೆ ಹಿರಿಯ ಮಕ್ಕಳ ತಜ್ಞ.

* ಡಾ.ಪಿ. ನರೇಶ್, ಮಣಿಪಾಲ್ ಆಸ್ಪತ್ರೆ ಮಕ್ಕಳ ತಜ್ಞ

* ಡಾ. ವಿಶ್ವನಾಥ ಕಾಮೋಜಿ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಮಕ್ಕಳ ತಜ್ಞ

* ಡಾ. ಬಿ.ಕೆ. ವಿಜೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಆಡಳಿತ)

* ಡಾ. ನಿರ್ಮಲ ಬುಗ್ಗಿ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್)

* ಡಾ. ಆನಂದ್, ಬಿಬಿಎಂಪಿ ಮಕ್ಕಳ ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ

* ಡಾ. ಸರಸ್ವತಿ, ಮಕ್ಕಳ ತಜ್ಞೆ, ದಕ್ಷಿಣ ವಲಯ ಆರೋಗ್ಯಾಧಿಕಾರಿ

* ಡಾ. ಲಲತ, ಮಕ್ಕಳ ತಜ್ಞೆ, ಪಶ್ಚಿಮ ವಲಯ ಆರೋಗ್ಯಾಧಿಕಾರಿ

* ಡಾ. ಭಾರತಿ, ಮಕ್ಕಳ ತಜ್ಞೆ, ಶ್ರೀರಾಂಪುರ ರುರಲ್ ಆಸ್ಪತ್ರೆ

* ಡಾ. ರಮೇಶ್, ಮಕ್ಕಳ ತಜ್ಞ, ಹಲಸೂರು ರುರಲ್ ಆಸ್ಪತ್ರೆ