ಜಿಲ್ಲೆ

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಬೀಗಮುದ್ರೆ

vijayavani

ಬೆಂಗಳೂರು : ನಗರೋತ್ಥಾನ ಯೋಜನೆ ಹಣವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಆರ್. ಗೋವಿಂದರಾಜು ಅವರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದು, ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ.

ಪಾಲಿಕೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸುವ ವೇಳೆ ವಿಶೇಷ ಆಯುಕ್ತರ (ಹಣಕಾಸು) ಅನುಮತಿ ಪಡೆದು, ಜ್ಯೇಷ್ಠತೆ ಅನುಸಾರ ಬಿಲ್ ಪಾವತಿ ಮಾಡಬೇಕು. ಆದರೆ, ಗೋವಿಂದರಾಜು ಅವರು ಆಯುಕ್ತರ ಅನುಮೋದನೆ, ಜ್ಯೇಷ್ಠತೆ ನಿಯಮ, ಯಾವುದೋ ಕಾಮಗಾರಿಗಾಗಿ ಇದ್ದ ಹಣವನ್ನು ಇನ್ನ್ಯಾವುದೇ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಕರ್ತವ್ಯಲೋಪ, ನಿಯಮ ಉಲ್ಲಂಘನೆ ಆಧಾರದಲ್ಲಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಗೆ ಹೋಗುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಮುಖ್ಯ ಲೆಕ್ಕಾಧಿಕಾರಿ ಸೆ.11ರಂದು ಸಾಮಾನ್ಯ ವರ್ಗದಡಿ 7.86 ಕೋಟಿ ರೂ., ಸೆ.14ರಂದು ಆಯುಕ್ತರ ಅನುಮತಿ ಪಡೆಯದೆ 7.68 ಕೋಟಿ ರೂ. ಮತ್ತು ರಾಜ್ಯ ಹಣಕಾಕು ನಿಗಮ (ಎಸ್‌ಎ್ಸಿ) ನಿಯಮ ಉಲ್ಲಂಸಿ 5.83 ಕೋಟಿ ರೂ. ಕಾಮಗಾರಿಗಳ ಬಿಲ್ ಅನುಮೋದನೆ ನೀಡಿದ್ದಾರೆ. ಜತೆಗೆ, ಜ್ಯೇಷ್ಠತೆ ನಿಯಮ ಉಲ್ಲಂಸಿ 6.86 ಕೋಟಿ ರೂ.ಗಳನ್ನು ಆ್ಲೈನ್ ಮೂಲಕ ಪಾವತಿಸಿದ್ದು, ಇದನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತಂಡ ರಚಿಸಿ ತನಿಖೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಭ್ರಷ್ಟಾಚಾರ ಕಂಡುಬಂದರೆ ಕ್ರಿಮಿನಲ್ ಕೇಸ್ :

ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಪ್ರತಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆರ್ಥಿಕ ತೊಂದರೆಯಾಗಿದ್ದು, ಹಣಕ್ಕಾಗಿ ಕಷ್ಟಪಡಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿರಿಯ ಅಧಿಕಾರಿಯಾಗಿ ತಪ್ಪೆಸಗಿದ್ದಾರೆ. ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದಿದ್ದರೆ, ಕೂಡಲೇ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.