ಜಿಲ್ಲೆ

ವಿಡಿಯೋ ಕಾನ್ಫರೆನ್ಸ್​ ಮೂಲಕ 10895.84 ಕೋಟಿ ರೂ. ಮೊತ್ತದ ಬಿಬಿಎಂಪಿ ಬಜೆಟ್​ ಮಂಡನೆ: ಕರೊನಾ ವೈರಸ್​ ನಿಯಂತ್ರಣಕ್ಕೆ 49.50 ಕೋಟಿ ರೂ.ಮೀಸಲು

ಬೆಂಗಳೂರು: ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ಬಿಬಿಎಂಪಿ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಬಜೆಟ್​ ಮಂಡಸಿದೆ.

ಒಟ್ಟು 10895.84 ಕೋಟಿ ರೂ. ಮೊತ್ತದ ಬಜೆಟ್​ ಅನ್ನು ಆರ್ಥಿಕ ಸ್ಥಾಯಿ ಸಮಿತಿ‌ ಅಧ್ಯಕ್ಷ ಎಲ್. ಶ್ರೀನಿವಾಸ್ ಮಂಡಿಸಿದರು.

ಕರೊನಾ ವೈರಸ್​ ನಿಯಂತ್ರಣಕ್ಕೆ 49.50 ಕೋಟಿ ರೂ. ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಉಚಿತವಾಗಿ ಅಂಚೆ ಮೂಲಕ ಜನರಿಗೆ ತಲುಪಿಸುವುದು. 2.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗುವಂತೆ 10 ಸಾವಿರ ಲೀ.ವರೆಗೆ ಉಚಿತವಾಗಿ ನೀರು ಸರಬರಾಜು ಮಾಡವ ಪ್ರಮುಖ ನಿರ್ಧಾರಗಳನ್ನು ಬಜೆಟ್​ನಲ್ಲಿ ಪ್ರಕಟಿಸಿದರು.

ಬಿಬಿಎಂಪಿಯ 8 ವಲಯಗಳಲ್ಲೂ ವಿಡಿಯೋ ಕಾನ್ಫರೆನ್ಸ್​ಗೆ ಅವಕಾಶ ಕಲ್ಪಿಸಲಾಗಿತ್ತು.

ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಹಾಗೂ ದಾಸರಹಳ್ಳಿ ವಲಯದಲ್ಲಿ ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಹೊಸದಾಗಿ ಪಾಲಿಕೆ ಶಾಲೆ ನಿರ್ಮಿಸಲು ಹತ್ತು ಕೋಟಿ ರೂ. ನಿಗದಿ. ಬಿ ಖಾತ ಆಸ್ತಿಗಳನ್ನ ಎ ಖಾತ ಮಾಡಲು ನಿರ್ಧಾರ. . ಪಂಡಿತ್ ದೀನದಯಾಳು ಉಪಾಧ್ಯಾಯರ ಹೆಸರಿನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ 25 ಹಾಸಿಗೆ ಸಾಮರ್ಥ್ಯದ ಮಕ್ಕಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿರುವ ಪಾಲಿಕೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ.

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರನ್ನು ಕಚೇರಿಯ ಋಣಭಾರ ಪತ್ರದಲ್ಲಿ ನಮೂದು ಮಾಡುವುದು. ಬಾಕಿ ಇರುವ 300 ಕೋಟಿ ರೂಪಾಯಿ ಸುಧಾರಣ ಶುಲ್ಕ ವಸೂಲಿಗೆ ಕ್ರಮ ಜರುಗಿಸುವುದು.

ಉದ್ದಿಮೆ ಪರವಾನಗಿ ಸರಳೀಕರಣಗೊಳಿಸುವುದು. ನಗರದಲ್ಲಿರುವ ಹೋಟೆಲ್‌ಗಳನ್ನು ಎ.ಬಿ.ಸಿ.ಡಿ ಮಾದರಿಯಲ್ಲಿ ವರ್ಗೀಕರಿ ತೆರಿಗೆ ವಿಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಸಂಪನ್ಮೂಲ ಕ್ರೋಢೀಕರಣಕ್ಕೆ ಸೂತ್ರಗಳನ್ನು ರೂಪಿಸಿದೆ.

ಪತ್ರಕರ್ತರ ‌ಅಪಘಾತ ವಿಮೆಗೆ 15 ಲಕ್ಣ ರೂ. ಅನುದಾನ. ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುತ್ತಿರುವ ಕೇಂದ್ರಗಳ ನಿರ್ವಹಣೆಗೆ 16 ಕೋಟಿ ರೂ ಮೀಸಲು ಇಡಲಾಗಿದೆ.