ಹೋಬಳಿಯ ಕೆಂಕೆರೆ ಗ್ರಾಮದ ಚೆನ್ನಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದಿನೇಶ್ ಕೊಕ್ಕಡ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. ಗೀತಾ, ಗುರುಲಿಂಗಯ್ಯ, ಕವಿತಾ, ಪದ್ಮಾವತಿ ಇದ್ದರು. 
ಜಿಲ್ಲೆ

ಬಡವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಿ

ಗಂಡಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾತೃಶ್ರೀ ಹೇಮಾವತಿ ಹೆಗಡೆ ಅವರ ಆಶಯದಂತೆ ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಮಟ್ಟದ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ ಹೇಳಿದರು.

ಗಂಡಸಿ ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ವೃದ್ಧೆ ಚೆನ್ನಮ್ಮ ಅವರಿಗೆ ಅಗತ್ಯ ವಸ್ತುಗಳ ಕಿಟ್ ಹಾಗೂ ಮಾಸಾಶನ ವಿತರಿಸಿ ಮಾತನಾಡಿದರು. ತಿಪಟೂರು ವಲಯಕ್ಕೆ ಸೇರುವ ಅರಸೀಕೆರೆ ತಾಲೂಕು ಕೆಲವು ಹಳ್ಳಿಗಳ ಬಡತನ ರೇಖೆಗಿಂತ ಕೆಳಗಿರುವ 15 ಕುಟುಂಬಗಳಿಗೆ ಮಾಸಾಶನ ವಿತರಿಸಲಾಗಿದೆ. ಉಳಿದ ಬಡ ಕುಟುಂಬಗಳನ್ನು ಗುರುತಿಸಿ ಸೌಲಭ್ಯ ನೀಡಲಾಗುವುದು ಎಂದರು .

ಕಾರ್ಯಕ್ರಮದಲ್ಲಿ ಕೆಂಕೆರೆ ಗ್ರಾಪಂ ಅಧ್ಯಕ್ಷೆ ಗೀತಾ, ಕೆರೆ ಸಮಿತಿ ಅಧ್ಯಕ್ಷ ಗುರುಲಿಂಗಯ್ಯ, ಒಕ್ಕೂಟದ ಅಧ್ಯಕ್ಷ ಕವಿತಾ, ಜ್ಞಾನ ವಿಕಾಸ ಅಧಿಕಾರಿ ಪದ್ಮಾವತಿ ಇದ್ದರು.