ಜಿಲ್ಲೆ

ಸಂತ ಸೇವಾಲಾಲ್​ರ ಗೀತೆ ಚಿತ್ರೀಕರಣ

Davangere - Desk - Shobha Krishna Gowda

ನ್ಯಾಮತಿ: ತಾಲೂಕಿನ ಸೂರಗೊಂಡನಕೊಪ್ಪದ ಬಾಯಾಗಡ್​ನಲ್ಲಿ ಭಾನುವಾರ ಬಿ. ಗೋಪಾಲನಾಯ್ಕ ರಚಿಸಿ ಹಾಡಿರುವ ಸಂತ ಸೇವಾಲಾಲ್ ಮಹಾರಾಜರ ಭಕ್ತಿಗೀತೆಯ ಚಿತ್ರೀಕರಣಕ್ಕೆ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್​ನಾಯ್ಕ ಚಾಲನೆ ನೀಡಿದರು.

ರಿಷಿತ್ ಸಾಮ್ರಾಟ್ ನಿರ್ದೇಶನ ಹಾಗೂ ನೃತ್ಯ ಸಂಯೋಜನೆ, ರವಿ ಛಾಯಾಗ್ರಹಣ ಮತ್ತು ಆರ್. ಅಶ್ವಿನಿ ರಾಠೋಡ್ ಅವರ ನಿರ್ವಣದಲ್ಲಿ ಗೀತಚಿತ್ರ ಮೂಡಿ ಬರಲಿದೆ. ಎನ್. ರಾಮು ರಾಠೋಡ್ ಮತ್ತು ಸಹ ಕಲಾವಿದರು ಅಭಿನಯಿಸಲಿದ್ದಾರೆ. ತಾಲೂಕಿನ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಯ್ಕ ಇತರರು ಇದ್ದರು.