ಚಿಕ್ಕಮಗಳೂರಿನ ಕೋಟೆ ಬಡಾವಣೆಯ ಗಾಂತವ್ಯ ನೃತ್ಯ ಶಾಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಿತ್ಯ ಜೀವನ ಮತ್ತು ವಿಜ್ಞಾನದ ಕುರಿತು ಅವತಿ ಪ್ರೌಢಶಾಲೆ ಶಿಕ್ಷಕಿ ರೇಖಾ ನಾಗರಾಜ್‌ರಾವ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಾಲೆಯ ವ್ಯವಸ್ಥಾಪಕಿ ನವಿತಾ, ಶಿಕ್ಷಕ ವಿವೇಕ್ ಉಪಸ್ಥಿತರಿದ್ದರು. 
ಜಿಲ್ಲೆ

ಮೂಲ ವಿಜ್ಞಾನ ನಿತ್ಯ ಬದುಕಿನ ಸಾಧನ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ನಿತ್ಯ ಜೀವನದಲ್ಲಿ ಅಡುಗೆಯಿಂದ ಹಿಡಿದು ಪ್ರತಿ ಹಂತದಲ್ಲೂ ವಿಜ್ಞಾನದ ಬಳಕೆಯಾಗುತ್ತದೆ. ಅದು ಕೆಲವೊಮ್ಮೆ ಶಾಸ್ತç, ಸಂಪ್ರದಾಯ ಅನ್ನುವ ಹೆಸರಲ್ಲೂ ರೂಢಿಯಲ್ಲಿದೆ. ವಿಜ್ಞಾನವಿಲ್ಲದೇ ಜೀವನ ಮುಂದೆ ಸಾಗುವುದಿಲ್ಲ ಎಂದು ಆವತಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಹಾಗೂ ಕಲ್ಕಟ್ಟೆ ಪುಸ್ತಕದ ಮನೆಯ ಮುಖ್ಯಸ್ಥೆ ರೇಖಾ ನಾಗರಾಜರಾವ್ ತಿಳಿಸಿದರು.

ನಗರದ ಕೋಟೆ ಬಡಾವಣೆಯ ಗಾಂತವ್ಯ ನೃತ್ಯ ಶಾಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಿತ್ಯ ಜೀವನ ಮತ್ತು ವಿಜ್ಞಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿದ ಅವರು, ಬಾಲ್ಯದಿಂದಲೂ ವೈಜ್ಞಾನಿಕ ಮನೋಭಾವ ರೂಢಿಸಿಕೊಂಡಲ್ಲಿ ಬದುಕು ಸುಲಭ ಎಂದೆನಿಸುತ್ತದೆ. ಹಳೆಯದೆಲ್ಲವನ್ನು ವಿರೋಧಿಸುವುದೇ ವಿಜ್ಞಾನ ಎಂಬ ಭಾವನೆ ಹೋಗಬೇಕು. ಹಳೆಯದರಲ್ಲಿರುವ ವೈಜ್ಞಾನಿಕ ಸತ್ಯ ಅರಿಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗಾಂತವ್ಯ ಶಾಲೆಯ ವ್ಯವಸ್ಥಾಪಕಿ ನವಿತಾ, ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಏಳಿಗೆಗೆ ಸಹಕಾರಿ. ನಮ್ಮ ಶಿಬಿರದಲ್ಲಿ ಹಾಡು, ನೃತ್ಯ, ಬರವಣಿಗೆ, ಸಾಹಿತ್ಯ, ಸಂಗೀತ, ಕಲೆ, ಕ್ರಾಫ್ಟ್, ವಿಜ್ಞಾನ ಹೀಗೆ ಹಲವು ವಿಷಯಗಳನ್ನು ತಿಳಿಸಲಾಗುತ್ತಿದೆ. ಪ್ರವಾಸವೂ ಶಿಬಿರದ ಪ್ರಮುಖ ಅಂಶ ಎಂದು ತಿಳಿಸಿದರು.
ಇದೇ ವೇಳೆ ರೇಖಾ ನಾಗರಾಜ್‌ರಾವ್ ಅವರು ಮಕ್ಕಳಿಗೆ ಆಕರ್ಷಣೀಯವೆನಿಸುವ ಕಾಮನ ಬಿಲ್ಲಿನ ಪ್ರಯೋಗ, ಗಾಳಿಯ ಒತ್ತಡಕ್ಕೆ ಸಂಬAಧಿಸಿದ ಸರಳ ರಾಸಾಯನಿಕ ಕ್ರಿಯೆಗಳ ಪ್ರಯೋಗ ನಡೆಸಿ ಮಕ್ಕಳಿಗೆ ಮಾಹಿತಿ ನೀಡಿದರಲ್ಲದೆ ಮಕ್ಕಳಿಂದಲೂ ಪ್ರಯೋಗ ಮಾಡಿಸಿ ಅವರ ಕುತೂಹಲ ಹೆಚ್ಚಿಸಿದ್ದಲ್ಲದೇ ಆಸಕ್ತಿ ಬೆಳೆಸಿದರು.
ಶಿಬಿರದಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ವಿವೇಕ್ ಸ್ವಾಗತಿಸಿ ವಂದಿಸಿದರು.