ಜಿಲ್ಲೆ

ಸೂರಕುಂಟೆಯಲ್ಲಿ ಮೂಲ ಸೌಲಭ್ಯ ಮರೀಚಿಕೆ

ಕೋಲಾರ ಡೆಸ್ಕ್

ಮುಳಬಾಗಿಲು: ತಾಲೂಕಿನ ನಂಗಲಿ ಗ್ರಾಮದಿಂದ ಗುಮಕಲ್​ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಸೂರಕುಂಟೆ ಗ್ರಾಮದಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದೇ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ.

ಜಗತ್ತು 5ಜಿ ಇಂಟರ್​ನೆಟ್​ನತ್ತ ಮುಖ ಮಾಡುತ್ತಿರುವ ಹೊತ್ತಿನಲ್ಲಿ, ಈ ಗ್ರಾಮವು ಇಂರ್ಟನೆಟ್​ ಸಂಪರ್ಕದಿಂದ ದೂರ ಉಳಿದಿರುವುದು ಮತ್ತೊಂದು ಪರಿಸ್ಥಿತಿಯಾಗಿದೆ. ಈ ಬಗ್ಗೆ ದೂರಸಂಪರ್ಕ ಇಲಾಖೆ ಗಮನಹರಿಸಿ ಗ್ರಾಮ ಕುಗ್ರಾಮಗಳಿಗೂ ಮೊಬೈಲ್​ ನೆಟ್​ವರ್ಕ್​, ಇಂರ್ಟನೆಟ್​ ಕಲ್ಪಿಸುವ ಜವಾಬ್ದಾರಿ ನಿರ್ವಹಿಸಬೇಕಿದೆ.

ಗುಮ್ಮಕಲ್ಲು ಪಂಚಾಯಿತಿ ವ್ಯಾಪ್ತಿಯ ಸೂರಕುಂಟೆಯಲ್ಲಿ ಸುಮಾರು 200 ಮನೆಗಳಿದ್ದು, 1 ಸಾವಿರ ಜನ ವಾಸಿಸುತ್ತಿದ್ದಾರೆ.

ಟೆಕ್ನಾಲಜಿ ಕಾಲದಲ್ಲಿ ಶೈಕ್ಷಣಿಕವಾಗಿ ಶಾಲಾ&-ಕಾಲೇಜುಗಳಲ್ಲಿ ನಡೆಯುವ ಚಟುವಟಿಕೆಗಳಿಗೆ ಇಂರ್ಟನೆಟ್​ ಕನೆಕ್ಟಿವಿಟಿ ತುಂಬಾ ಅಗತ್ಯವಿದ್ದರೂ ಈ ಗ್ರಾಮಕ್ಕೆ ನೆಟವರ್ಕ್​ ಭಾಗ್ಯವಿಲ್ಲದಂತಾಗಿದೆ.

ತಾಲೂಕಿನಲ್ಲಿ ಅತಿಹೆಚ್ಚು ಟೊಮ್ಯಾಟೊ ಬೆಳೆಯುವ ಗ್ರಾಮಗಳ ಪಟ್ಟಿಯಲ್ಲಿ ಸೂರಕುಂಟೆ ಇದ್ದು, ಕೃಷಿ ಮತ್ತು ಹೈನುಗಾರಿಕೆ ನಂಬಿ ಜೀವನ ಕಟ್ಟಿಕೊಂಡ ರೈತರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಶಯ ಹೊಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಕ್ಕೆ ನೆಟವರ್ಕ್​ ಟವರ್​ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಶುದ್ಧ ನೀರಿನ ಘಟಕದ ಯಂತ್ರದ ರಿಪೇರಿ ಆದ ಒಂದೆರಡು ವಾರ ಮಾತ್ರ ಕಾರ್ಯನಿರ್ವಹಿಸಿ ಮತ್ತೆ ಯಥಾ ಸ್ಥಿತಿಯಂತೆ ಮೂಲೆ ಸೇರುತ್ತದೆ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ, ಯೋಜನೆ ಉದ್ದೇಶವು ಈಡೇರದೆ ಶಿಥಿಲ ಯಂತ್ರಗಳ ರಿಪೇರಿಯದ್ದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಯಕವಾಗಿದೆ. ಶುದ್ಧ ನೀರಿನ ಘಟಕಗಳು ನಿಮಾರ್ಣಕ್ಕೆ ಸುಮಾರು 10 ಲಕ್ಷ ರೂ. ಖರ್ಚು ಬರುತ್ತಿದ್ದು, ಯಂತ್ರಗಳಿಗೆ 5 ಲಕ್ಷ ವೆಚ್ಚವಾಗುತ್ತಿದೆ. ಹೊಸ ಯಂತ್ರಗಳು ಅಳವಡಿಸಲು ಸರ್ಕಾರದಲ್ಲಿ ಅನುದಾನದ ಕೊರತೆಯಿಂದ ಮುರ್ಕಲು ಯಂತ್ರಗಳ ರಿಪೇರಿಗೆ ಸಿದ್ಧಸೂತ್ರವಾದರೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಗ್ರಾಮಸ್ಥರಾದ ರಾಮಚಂದ್ರ, ಮಂಜುನಾಥ್​, ಚೇತನ್​ ಮನವಿ ಮಾಡಿದ್ದಾರೆ.

ತುರ್ತು ಪರಿಸ್ಥಿತಿಯಲ್ಲೂ ನರಕಯಾತನೆ ಏನಾದರೂ ತೊಂದರೆಯಾದಲ್ಲಿ 108 ಆ್ಯಂಬುಲೆನ್ಸ್​ಗೋ ಅಥವಾ ಪೊಲೀಸ್​ ಇಲಾಖೆ ಸಂಪರ್ಕಿಸಲು ಪರದಾಡಬೇಕಿದೆ. ಸುಮಾರು ಬಾರಿ ಸರ್ವಿಸ್​ ಪ್ರಾವಿಡೆರ್ಸ್​ಗೆ ಮನವಿ ಮಾಡಿದರೂ, ಯಾವುದೇ ಅನುಕೂಲವಾಗಲಿಲ್ಲ, ಗ್ರಾಮದ ಶಾಲೆಗೆ ಹಾಗೂ ಇತರೆ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು ಬರಲು ಹಿಂಜರಿಯುವಂತ ಸ್ಥಿತಿ ನಿರ್ಮಾಣವಾಗಿದೆ. ಶಿಥಿಲಗೊಂಡ ಅಂಗನವಾಡಿ ಗ್ರಾಮದಲ್ಲಿರುವ ಅಂಗನವಾಡಿ ಹಳೇ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ಮೇಲ್ಚಾವಣಿ ಶಿಥಿಲಗೊಂಡಿದ್ದು, ಮೇಲಿಂದ ಮರಳು ಸಿಮೆಂಟ್​ ಉದುರುತ್ತದೆ. ಕಟ್ಟಡ ದುರಸ್ತಿ ಮಾಡುವುದು ಅಥವಾ ಹೊಸ ಕಟ್ಟಡ ನಿರ್ಮಿಸುವುದು ಬಗ್ಗೆ ಆಡಳಿತ ಕ್ರಮ ಕೈಗೊಳ್ಳಬೇಕಿದೆ.

ಅಂಗನವಾಡಿ ಕಟ್ಟಡ ಶಿಥಿಲ ಬಗ್ಗೆ ಸಿಡಿಪಿಒಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುವುದು. ಶುದ್ಧ ನೀರಿನ ಘಟಕದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದು, ಶ್ರೀ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುವುದು. > ಡಾ.ಕೆ. ಸರ್ವೇಶ್​ ತಾಪಂ ಇ ಒ ಮುಳಬಾಗಿಲು ಸೂರಕುಂಟೆ ಗ್ರಾಮದ ಶುದ್ಧ ನೀರಿನ ಘಟಕದ ಕಾಯಿನ್​ ಬಾಕ್ಸ್​ನಲ್ಲಿ ಈಗ ಸಮಸ್ಯೆ ಕಾಣಿಸಿಕೊಂಡಿದ್ದು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರಿಂಗ್​ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂಬಂಧಿಸಿದ ಮೇಂಟೆನೆಂಸ್​ ಗುತ್ತಿಗೆದಾರರಿಂದ ಸರಿಪಡಿಸಲು ಸೂಚನೆ ನೀಡಿದ್ದಾರೆ. > ಚಿಕ್ಕನರಸಿಂಹಯ್ಯ ಪಿಡಿಒ, ಗುಮ್ಮಕಲ್ಲು ಪಂಚಾಯಿತಿ ಗ್ರಾಮದ ಸಮಸ್ಯೆಗಳು 20 ದಿನಗಳಲ್ಲಿ ಬಗೆಹರಿಸದಿದ್ದಲ್ಲಿ ಸೂರಕುಂಟೆ ಗ್ರಾಮದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅರ್ನಿಧಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತಿದೆ. > ಎಸ್​.ಟಿ.ಸುಬ್ರಮಣಿ ಮುಖಂಡ