ಜಿಲ್ಲೆ

ಲಾಭದಲ್ಲಿ ವರ್ತಿಸಿದ್ದಬಸವೇಶ್ವರ ಅರ್ಬನ್​ ಸೊಸೈಟಿ

ಬೈಲಹೊಂಗಲ: ಪಟ್ಟಣದ ಶ್ರೀ ವರ್ತಿಸಿದ್ದಬಸವೇಶ್ವರ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 45.78 ಲ ರೂ. ಲಾಭಗಳಿಸಿ ಮುನ್ನಡೆದಿದ್ದು, ಸದಸ್ಯರ ಅಭಿವದ್ದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ನಿರ್ದೇಶಕ ಬಾಬು ಕುಡಸೋಮಣ್ಣವರ ಹೇಳಿದರು.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘದ 27ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಪತೆ ವಹಿಸಿ ಮಾತನಾಡಿ, ಸಂಘ 3173 ಷೇರು ಸದಸ್ಯರಿಂದ 1.19 ಕೋಟಿ ರೂ. ಷೇರು ಬಂಡವಾಳ, 2.50 ಕೋಟಿ ರೂ. ನಿಧಿ, 34.56 ಕೋಟಿ ರೂ. ಠೇವಣಿ, 40 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 27.37 ಕೋಟಿ ರೂ. ಸಾಲ ವಿತರಿಸಿದೆ. ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸಬೇಕೆಂದರು.

ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸಂಘದ ಸಂಸ್ಥಾಪಕ ಅಧ್ಯ ದಿ.ಬಿ.ಎಂ. ಕುಡಸೋಮಣ್ಣವರ, ಉಪಾಧ್ಯ ದಿ. ಗಂಗಪ್ಪ ಬೋಳನ್ನವರ ನಾಡಿನ ಅಭಿವದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಸಂಘ ಇತರ ಸಂಘಗಳಿಗೂ ಮಾದರಿಯಾಗಿದ್ದು, ಮತ್ತಷ್ಟು ಅಭಿವೃದ್ಧಿಯಾಗಲೆಂದು ಹಾರೆಸಿದರು. ಸಂಘದ ಸಂಸ್ಥಾಪಕ ಶಿವಾನಂದ ಕುಡಸೋಮಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಕ್ಯಾಷಿಯರ್​ ದೀಪಕ ಕುಡಸೋಮಣ್ಣವರ ವರದಿ ಓದಿದರು. ವಿಜಯರತ್ನ ಪುರಸತ ರೆತ ಮುಖಂಡ ಶಂಕರ ಬೋಳನ್ನವರ, ಬಿಇಒ ಎ.ಎನ್​.ಪ್ಯಾಟಿ, ಸಮನ್ವಯಾಧಿಕಾರಿ ಬಿ.ಎನ್​.ಕಸಾಳೆ ಸೇರಿ ಗಣ್ಯ ಸಾಧಕರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳನ್ನವರ, ನಿರ್ದೇಶಕರಾದ ಸಣ್ಣಬಸಪ್ಪ ಕುಡಸೋಮಣ್ಣವರ, ಮಲ್ಲಿಕಾರ್ಜುನ ಮೊರಬದ, ಮಹಾರುದ್ರಪ್ಪ ಸಂಪಗಾಂವಿ, ವೀರಣ್ಣ ಸಾಲಿಮಠ, ದುಂಡಪ್ಪ ತುರಮರಿ, ಮಲ್ಲಪ್ಪ ಕುಡಸೋಮಣ್ಣವರ, ಅಬ್ದುಲ್​ರಹೆಮಾನ್​ ನಂದಗಡ, ಡಿ.ಆರ್​.ತಳವಾರ, ರಾಜೇಶ ಬಡಿಗೇರ, ಸುನೀಲ ವಳಸಂಗ, ಕಾರ್ಯದರ್ಶಿ ಮಲ್ಲಿಕಾರ್ಜುನ ಗೌರಿ, ರುದ್ರಪ್ಪ ಕತ್ತಿ, ಮಡಿವಾಳಪ್ಪ ಭಟ್ಟಿ, ಮೋಹನ ಪಾಟೀಲ, ಶಿವಬಸಪ್ಪ ಮದ್ನಳ್ಳಿ, ಅನಿಲ ಲಗಮನ್ನವರ, ಉಳವಪ್ಪ ಶೆಟಗಾರ, ಮಡಿವಾಳಪ್ಪ ಮಂಗಳಗಟ್ಟಿ, ರಾಜು ಕುಡಸೋಮಣ್ಣವರ, ಶಿವಬಸ್ಸು ಕುಡಸೋಮಣ್ಣವರ, ಈರಣ್ಣ ಬೆಟಗೇರಿ, ಶ್ರೀಶೆಲ ಶರಣಪ್ಪನವರ, ಬಸವರಾಜ ಬೋಳಗೌಡರ, ಶಂಕರ ಚಿಟ್ಟಿ, ಈರಪ್ಪ ಬೆಳಗಾಂವಿ, ಮಹಾಬಳೇಶ್ವ ಬೋಳನ್ನವರ, ಎಂ.ಎಂ.ಕೋಲಕಾರ, ರಾು ಕೋಲಕಾರ ಇತರರಿದ್ದರು.