ಕವಿತಾಳ: ಸಮೀಪದ ಆನಂದಗಲ್‌ನಲ್ಲಿ ಸೋಮವಾರ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಡಗರದಿಂದ ಜರುಗಿತು.
ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ 131 ಕುಂಭ, ಕಳಸ ಹೊತ್ತ ಮಹಿಳೆಯರಿಂದ ಉಟಕನೂರು ಮರಿಬಸವಲಿಂಗ ದೇಶೀಕೇಂದ್ರಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು.
ಮಸ್ಕಿಯ ಗಚ್ಚಿನಮಠದ ವರರುದ್ರಮುನಿಸ್ವಾಮಿ, ಉಟಕನೂರಿನ ಮರಿಬಸವರಾಜ ದೇಶೀಕೇಂದ್ರ ಸ್ವಾಮಿ, ಷಡರಕ್ಷರಯ್ಯ ಸ್ವಾಮಿ ಉಟಕನೂರು ಮಠದ ಪೂಜಾರಿ, ಆದಯ್ಯತಾತ, ಸಿದಯ್ಯ ತಾತ, ಹುಚ್ಚರಡ್ಡಿ ಹುಲಿಗಡ್ಡ, ಶರಣಪ್ಪ ಕಲಂಗೇರ, ಸುಂಡೆಪ್ಪ ಅಮರಪ್ಪ, ಬಸನಗೌಡ ಪೊಪಾ, ಪಂಪಾಪತಿ ತುಮಕೂರ, ಹುಚ್ಚರಡ್ಡಿ ತುಮಕೂರ, ನಾಗಣ್ಣ ಬುದ್ದಿನ್ನಿ, ಚಂದ್ರಶೇಖರ ವಟಗಲ್, ಈರನಗೌಡ ಮಾಪಾ, ಪ್ರಬುರಾಯಗೌಡ ವಟಗಲ್, ಶರಣಪ್ಪಗೌಡ ಪೋಪಾ, ವಿಜಯಕುಮಾರ ಅಂಗಡಿ, ಶೇಷನಗೌಡ ಅಂಗಡಿ, ಶಿವಣ್ಣ ಗುಂಟರಾಳ, ಹುಸೇನಪ್ಪ, ವೆಂಕಟೇಶ ನಾಯಕ, ಅಕ್ಕಮ್ಮ ಜಾಲಪೂರ, ಬಸಮ್ಮ ಶಿವರಾಜ, ಪಾರ್ವತಮ್ಮ ಬಸನಗೌಡ, ಶಂಕ್ರಮ್ಮ ಪೂಜಾರಿ ಇತರರಿದ್ದರು.