ಬೆಳಗಾವಿ: ನಗರದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 117.45 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.12 ಲಾಭಾಂಶ ವಿತರಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ರಮೇಶ ಕಳಸಣ್ಣವರ ಘೋಷಿಸಿದರು.
ಇಲ್ಲಿನ ರಾಮನಗರದ ವಿದ್ಯಾಧಿರಾಜ ಸಭಾಗೃಹದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 62ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 2024-25ನೇ ಸಾಲಿನಲ್ಲಿ ಬ್ಯಾಂಕ್ 160.54 ಲಕ್ಷ ರೂ. ಲಾಭಗಳಿಸಿದ್ದು, 43.09 ಲಕ್ಷ ರೂ. ಕರ ಪಾವತಿ ನಂತರ 117.45 ಲಕ್ಷ ರೂ. ನಿವ್ವಳ ಲಾಭವಾಗಿದೆ ಎಂದರು.
20 ವರ್ಷಗಳಿಂದ ಬ್ಯಾಂಕಿನ ಸದಸ್ಯರಾಗಿರುವ 38 ಹಿರಿಯ ಸದಸ್ಯರನ್ನು ಗೌರವಿಸಲಾಯಿತು. 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಸೇರಿ ವಿವಿಧ ಪದವಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿರುವ 28 ಸದಸ್ಯರ ಮಕ್ಕಳಿಗೆ ಹಾಗೂ ಸಾಧನೆಗೈದ ರಾಮತೀರ್ಥನಗರ, ಹುಬ್ಬಳ್ಳಿ, ಕ್ಲಬ್ ರೋಡ್ ಶಾಖೆಗಳ ಮುಖ್ಯ ವ್ಯವಸ್ಥಾಪಕರಿಗೆ ಪ್ರಶಸ್ತಿ, ನಗದು ಬಹುಮಾನ ನೀಡಲಾಯಿತು.
ಉಪಾಧ್ಯಕ್ಷ ಸತೀಶ ಪಾಟೀಲ, ನಿರ್ದೇಶಕ ಬಾಳಪ್ಪ ಕಗ್ಗಣಗಿ, ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣವರ, ಬಸವರಾಜ ಉಪ್ಪಿನ, ಸರಳಾ ಹೇರೆಕರ, ಗಿರೀಶ ಕತ್ತಿಶೆಟ್ಟಿ, ಗಿರೀಶ ಬಾಗಿ, ಸಚಿನ್ ಶಿವಣ್ಣವರ, ಬಾಲಚಂದ್ರ ಬಾಗಿ, ಜಗದೀಶ ಖಡಬಡಿ, ಪೂಜಾ ಹುಕ್ಕೇರಿ, ಚಂದ್ರಕಾಂತ ಕಟ್ಟಿಮನಿ, ರಾಜೀವ ಕಾಳೇನಟ್ಟಿ, ಮಹಾದೇವ ಅಥಣಿ, ಚಂದ್ರಶೇಖರ ಹಿರೇಮಠ, ರಾಜಶೇಖರ ಚೊಣ್ಣದ, ಸೋಮಶೇಖರ ಹೊಂಬಳ, ಮಹೇಶ ಉಡದಾರ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ವಾಲಿ, ಉಪಪ್ರಧಾನ ವ್ಯವಸ್ಥಾಪಕ ಆರ್.ಯು.ತೆಲಸಂಗ, ಮುಖ್ಯ ಶಾಖಾ ವ್ಯವಸ್ಥಾಪಕ ವಿ.ವಿ. ಅಂಟಿನ ಇತರರಿದ್ದರು.