ಇಳಕಲ್ಲ: ದಾಸಿಮಯ್ಯನವರ ವಚನಾಮೃತ ಎಲ್ಲರ ಜೀವನಕ್ಕೆ ಮಾರ್ಗದರ್ಶನೀಯ. ಅವರ ವಚನಗಳು ಇಂದಿಗೂ ಪ್ರಸ್ತುತ ಎಂದು ಶ್ರೀ ವಿಜಯ ಮಹಾಂತೇಶ ಕಲೆ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಸುಗ್ಗಮದ ಹೇಳಿದರು.
ನಗರದ ಕಿರಣ ಬಿಜ್ಜಲ ಅವರ ನಿವಾಸದಲ್ಲಿ ಇಳಕಲ್ಲ ತಾಲೂಕು ದೇವಾಂಗ ನೌಕರರ ಸಂಘ ಗುರುವಾರ ಏರ್ಪಡಿಸಿದ್ದ ಶ್ರೀ ದೇವರ ದಾಸಿಮಯ್ಯನವರ ವಚನ ಉತ್ಸವದ ಮನೆ ಮನಗಳಲ್ಲಿ ದಾಸಿಮಯ್ಯ ಚಿಂತನ ಗೋಷ್ಠಿ-14 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆ-ಮನಗಳಲ್ಲಿ ದಾಸಿಮಯ್ಯ ಕಾರ್ಯಕ್ರಮದ ಮೂಲಕ ದಾಸಿಮಯ್ಯನವರ ಚಿಂತನೆಗಳನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಕಾರ್ಯ. ಪ್ರತಿಯೊಬ್ಬ ನೇಕಾರನ ಮನೆಯಲ್ಲಿಯೂ ಕಾರ್ಯಕ್ರಮ ಜರುಗಲಿ ಎಂದರು.
ಮುನಿಸ್ವಾಮಿಗಳು ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ನಾರಾಯಣ ಬಿಜ್ಜಲ ಅಧ್ಯಕ್ಷತೆ ವಹಿಸಿದ್ದರು. ಅರುಣ ಬಿಜ್ಜಲ, ರುದ್ರಪ್ಪ ಅರಳಿಕಟ್ಟಿ, ಲಲಿತಾಬಾಯಿ ಸಪ್ಪರದ, ಸತೀಶ ಸಪ್ಪರದ, ಶಿವಶಂಕರ ಮೆದಿಕೇರಿ, ಬಸವರಾಜ ಕಿರಗಿ, ಶಂಕರಗೌಡ ಮುನವಳ್ಳಿ, ಬಿಜ್ಜಲ ಪರಿವಾರದ ಸದಸ್ಯರು, ಲಲಿತಾ ಬಳಗದ ಮಾತೆಯರು, ಸಮಾಜ ಬಾಂಧವರು, ನೌಕರ ಸಂಘದ ಪದಾಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸವಿತಾ ಸಪ್ಪರದ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಇಂದರಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಿಪ್ಪಣ್ಣ ಚಿತ್ತರಗಿ ಸ್ವಾಗತಿಸಿದರು. ಜಗದೀಶ ಅರಳಿಕಟ್ಟಿ ವಂದಿಸಿದರು. ವೇಣುಶಂಕರ ಕುಂಟೋಜಿ ನಿರೂಪಿಸಿದರು.