ಬೆಳಗಾವಿ:ನಗರದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಜೀವಮಾನ ಸಾಧನೆಗಾಗಿ ಕೊಡಮಾಡುವ 2024ನೇ ಸಾಲಿನ ಕಾದಂಬರಿ ಸಾಹಿತ್ಯ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ಕಥೆ, ಕಾದಂಬರಿಕಾರ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನವರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅವರು, ಬಸವರಾಜ ಕಟ್ಟೀಮನಿ ಅವರ ತತ್ತ್ವ-ಆದರ್ಶಗಳಂತೆ ಬರೆಯುತ್ತ ಬದುಕು ನಡೆಸಿದವರು. ಬಸವರಾಜ ಕಟ್ಟೀಮನಿ ಅವರ ಹೆಸರಿನಲ್ಲಿ ಕೊಡುವ ಈ ಪ್ರಶಸ್ತಿಯು ರೂ.50,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಮೇ 25ರಂದು ಪ್ರಶಸ್ತಿ ಪ್ರಧಾನ ಸಮಾರಂಭವ ನಡೆಯಲಿದೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.