ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಕೆ.ಬಿ.ಪುಟ್ಟಸ್ವಾಮಿ, ಕೆ.ಎಲ್.ರವಿ, ಎಚ್.ಸಿ.ಸುರೇಶ್, ಮಂಚೇಗೌಡ, ಈಶ್ವರಚಾರಿ, ಶಿವಲಿಂಗಯ್ಯ, ಪುಟ್ಟತಾಯಮ್ಮ, ಲಕ್ಷ್ಮಿ ಇದ್ದರು.  
ಜಿಲ್ಲೆ

ಬಸವರಾಜು ಅವಿರೋಧ ಆಯ್ಕೆ

ಅಭಿನಯ್ ಎಚ್.ಎಂ

ಮದ್ದೂರು: ತಾಲೂಕಿನ ಹಳ್ಳಿಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವರಾಜು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಶಿವಮಾದಯ್ಯ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಬಸವರಾಜು ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪಿ.ಧರಣಿಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಬಸವರಾಜು ಮಾತನಾಡಿ, ಸಂಘದ ನಿರ್ದೇಶಕರನ್ನು ವಿಶ್ವಾಸ ಪಡೆದು ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಕೆ.ಬಿ.ಪುಟ್ಟಸ್ವಾಮಿ, ನಿರ್ದೇಶಕರಾದ ಕೆ.ಎಲ್.ರವಿ, ಎಚ್.ಸಿ.ಸುರೇಶ್, ಮಂಚೇಗೌಡ, ಈಶ್ವರಚಾರಿ, ಶಿವಲಿಂಗಯ್ಯ, ಪುಟ್ಟತಾಯಮ್ಮ, ಲಕ್ಷ್ಮೀ, ಮುಖಂಡರಾದ ಬೋರಯ್ಯ, ಎಚ್.ಟಿ.ರಾಮಚಂದ್ರಯ್ಯ, ಶಿವಲಿಂಗಯ್ಯ, ಅಶೋಕ್, ಚಂದು, ಅಪ್ಪುಗೌಡ, ನಟರಾಜು, ನಾಗರಾಜು, ಬಿ.ಪಿ.ನಾಗರಾಜು, ರವಿ, ಜಗದೀಶ್ ಹಾಗೂ ನೌಕರರಾದ ಎಚ್.ಟಿ.ರುದ್ರಪ್ಪ, ಎಚ್.ಎಸ್.ಲಿಂಗೇಗೌಡ ಸೇರಿದಂತೆ ಇತರರು ಹಾಜರಿದ್ದರು.