ವಿಜಯವಾಣಿ ಸುದ್ದಿಜಾಲ ಗದಗ
ನಾಲ್ಕು ದಶಕದಿಂದ ಶಿಕ್ಷಕರ ಹಿತ ಕಾಯುತ್ತಾ ಬಂದಿರುವ ಬಸವರಾಜ ಹೊರಟ್ಟಿ ಅವರ ನಿಸ್ವಾರ್ಥ ಸೇವೆ ಶೈಣಿಕ ೇತ್ರದಲ್ಲಿ ಸದಾ ಕಾಲ ಸ್ಮರಣೀಯ ಎಂದು ಅವ್ವ ಸೇವಾ ಟ್ರಸ್ಟ್ ಸಂಚಾಲಕ ಡಾ. ಬಸವರಾಜ ಧಾರವಾಡ ಹೇಳಿದರು.
ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ಪ್ರವೇಶಿಸಿ ಶುಕ್ರವಾರ 43 ವರ್ಷ ರ್ಪೂಣಗೊಂಡ ನಿಮಿತ್ಯ ನರಸಾಪುರದ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ "ಬಸವರಾಜ ಹೊರಟ್ಟಿ ಅವರ ಸಾರ್ಥಕ ಸೇವೆ ಸದಾಕಾಲ ಸ್ಮರಣೀಯ' ಕುರಿತು ಚಿಂತನ ಮಂಥನ ಹಾಗೂ ಸಿಹಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಷ್ಟೊಂದು ಸುದೀರ್ ಸೇವೆ ಸಲ್ಲಿಸಿದ ನಾಡಿನ ಏಕೈಕ ಶಿಕ್ಷಕರ ಸಮೂಹದ ನಂಬುಗೆಯ ನಾಯಕ ಬಸವರಾಜ ಹೊರಟ್ಟಿ ಆಗಿದ್ದಾರೆ. ಶಿಕ್ಷಕರ ಹಾಗೂ ಹೊರಟ್ಟಿ ಅವರ ಸಂಬಂಧ ಅವಿನಾಭಾವ. ಹೀಗಾಗಿ ಶಿಕ್ಷಕರ ಸಮೂಹವನ್ನು ಸದಾ ಕಾಲ ಪ್ರೀತಿಸುವ ಅವರು, ಶಿಕರ ಕುರಿತು ಚಿಂತಿಸುವ ಹಿತಚಿಂತಕರು ಎಂದರು.
ಮುಖ್ಯೋಪಾಧ್ಯಾಯ ಎಂ. ಎಚ್. ಪೂಜಾರ ಮಾತನಾಡಿ, ಹೊರಟ್ಟಿ ಅವರು ಶಿಕ್ಷಕರ ಸಮೂಹದ ಸಮಸ್ಯೆಗೆ ಸ್ಪಂದಿಸುವುದರ ಜೊತೆಗೆ ಶಾಲಾ ಕಾಲೇಜುಗಳ ಮೂಲಭೂತ ಅಭಿವೃದ್ಧಿಗಾಗಿ ತಮ್ಮ ಶಾಸಕರ ಪ್ರದೇಶ ಅಭಿವೃದ್ಧಿ ಅನುದಾನವನ್ನು ನೀಡುವ ಮೂಲಕ ಶಾಲಾ ಕಾಲೇಜುಗಳ ಕಳೆಯನ್ನು ಹೆಚ್ಚಿಸಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಎಸ್.ಎಂ. ಅಗಡಿ, ನಿವೃತ್ತ ಪ್ರಾಧ್ಯಾಪಕ ಅನ್ನದಾನಿ ಹಿರೇಮಠ, ಸಿ. ಎಂ. ಮಾರನಬಸರಿ, ಜಿ. ಎ್. ಗುರುಸ್ವಾಮಿಮಠ, ಕೆ. ಎ. ಹೊಳಗುಂದ, ಎಸ್. ಎಸ್. ಮಠಪತಿ, ರಾವೇಂದ್ರ ತಳವಾರ, ಲಕ್ಷ$್ಮಣ ರಾಟಿಮನೆ, ಪ್ರಭು ಹೊನಗಣ್ಣವರ, ಎಸ್. ಎಸ್. ಮಠಪತಿ ಇದ್ದರು.