ಮಾಯಕೊಂಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ನೀಡಿ, ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ದಾವಣಗೆರೆ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಗುರುವಾರ ಶುದ್ಧಗಂಗಾ ಘಟಕ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅವರು ಆರಂಭಿಸಿದ ಈ ಯೋಜನೆಯು ಗ್ರಾಮೀಣ ಮಹಿಳೆಯರು, ಯುವಕರು, ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ತಿಳಿಸಿದರು.
ನಿರುದ್ಯೋಗಿ ಯುವಕರಿಗೆ ಈ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ನೀಡಿ ಸ್ವ-ಉದ್ಯೋಗಕ್ಕೆ ನೆರವಾಗಿದೆ. ವಿದ್ಯಾರ್ಥಿ ಮತ್ತು ವೃದ್ಧಾಪ್ಯ ವೇತನ, ದೇವಾಲಯಗಳ ಜೀಣೋದ್ಧಾರಕ್ಕಾಗಿ ಧನಸಹಾಯ ಸೇರಿ ಹಲವು ಸೌಲಭ್ಯವನ್ನು ಒದಗಿಸಿದೆ ಎಂದು ಶ್ಲಾಘಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಮಾತನಾಡಿ, ಗ್ರಾಮಸ್ಥರು ಶುದ್ಧಗಂಗಾ ಕುಡಿಯುವ ನೀರಿನ ಘಟಕದ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ನರಗನಹಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಗರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ನಿರ್ದೇಶಕಿ ಯಶೋದಾಗಿರೀಶ್, ವನಜಾಕ್ಷಮ್ಮ, ಮುಖಂಡರಾದ ಎಚ್.ಎಸ್. ಮುರುಗೇಂದ್ರಪ್ಪ, ಜಿ.ಎಸ್. ದೇವೇಂದ್ರಪ್ಪ, ಟಿ. ಹನುಮಂತಪ್ಪ, ಎಚ್.ಡಿ. ಕಿರಣ್ ಕುಮಾರ್, ಡಾ.ಎಚ್.ಬಿ. ಮಂಜುನಾಥ್, ತಾಪ ಮಾಜಿ ಉಪಾಧ್ಯಕ್ಷ ತಿಪ್ಪೇಶ್ ನಾಯ್್ಕ ಜಿ.ಎಸ್. ದೇವೇಂದ್ರಪ್ಪ, ಎಚ್.ಜಿ. ದೇವರಾಜ್, ಎಚ್.ಎಂ. ಚಂದ್ರಪ್ಪ, ಶಿವಾನಂದಪ್ಪ, ಎಚ್.ಡಿ. ಶಿವರುದ್ರಪ್ಪ, ಎಚ್.ಜಿ. ಕುಬೇರಪ್ಪ ಇತರರಿದ್ದರು.