ಜಿಲ್ಲೆ

ಅಧ್ಯರಾಗಿ ಬಸವಂತ ಕೋಣಿ ಆಯ್ಕೆ

ಸೋಮಲಿಂಗ ತಳವಾರ

ಬೆಟಗೇರಿ: ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂದ ಆಡಳಿತ ಮಂಡಳಿ ಅಧ್ಯ ಹಾಗೂ ಉಪಾಧ್ಯರ ಆಯ್ಕೆಗಾಗಿ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಬಸವಂತ ಕೋಣಿ, ಉಪಾಧ್ಯರಾಗಿ ರೇವಣಸಿದ್ದ ಸವತಿಕಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾಯಿತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಎಸ್​.ಬಿ.ಬಿರಾದಾರ ಪಾಟೀಲ ಪ್ರಮಾಣಪತ್ರ ವಿತರಿಸಿದರು. ಸಂದ ಪರವಾಗಿ ಚುನಾಯಿತರನ್ನು ಸನ್ಮಾನಿಸಲಾಯಿತು. ಬಸವಂತ ಕೋಣಿ ಮಾತನಾಡಿ, ಸಂದ ಅಭಿವದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಈರಯ್ಯ ಹಿರೇಮಠ, ಸಂದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಗ್ರಾಮಸ್ಥರು ಇತರರು ಇದ್ದರು.