ಬೆಳಗಾವಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗಾಯತ ಮಹಿಳಾ ಸಮಾಜದ ರಜತ ಮಹೋತ್ಸವವನ್ನು ಅಕ್ಕಮಹಾದೇವಿ ಮೆಳ್ಳಿಗೇರಿ ಉದ್ಘಾಟಿಸಿದರು. ಆಶಾ ಕೋರೆ, ಮಂಗಲಾ ಅಂಗಡಿ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ಸರಳಾ ಹೆರೇಕರ, ಕೀರ್ತಿ ಪಾಟೀಲ ಇತರರಿದ್ದರು. 
ಜಿಲ್ಲೆ

ಬಸವಣ್ಣನವರ ಆದರ್ಶ ಅಳವಡಿಸಿಕೊಳ್ಳೋಣ

ಬೆಳಗಾವಿ: ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವೆಲ್ಲ ಉತ್ತಮ ಮಾರ್ಗದಲ್ಲಿ ಸಾಗಲು ಸಂಕಲ್ಪ ತೊಡಬೇಕು ಎಂದು ಏಕಸ್ ಫೌಂಡೇಷನ್ ಅಧ್ಯಕ್ಷೆ ಅಕ್ಕಮಹಾದೇವಿ ಮೆಳ್ಳಿಗೇರಿ ಹೇಳಿದ್ದಾರೆ.
ನಗರದ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿರುವ ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗಾಯತ ಮಹಿಳಾ ಸಮಾಜದ ರಜತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಆಶಾ ಕೋರೆ, ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು. ಜಯಶೀಲಾ ಬ್ಯಾಕೋಡ, ಆಶಾ ಪಾಟೀಲ, ಶೈಲಜಾ ಭಿಂಗೆ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ಸರಳಾ ಹೆರೇಕರ, ಕೀರ್ತಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಮಂಗಲಾ ಅಂಗಡಿ, ಡಾ.ಗುರುದೇವಿ ಹುಲೆಪ್ಪನವರಮಠ ಇತರರು ಇದ್ದರು.