ಬೆಂಗಳೂರು: ವೈಚಾರಿಕ ನೆಲೆಗಟ್ಟಿನಲ್ಲಿ ವಿಚಾರ ಕ್ರಾಂತಿ ನಡೆಸಿರುವ ಬಸವಣ್ಣ ತತ್ವಗಳು ಸಾರ್ವಕಾಲಿಕವಾಗಿದೆ. ಮಕ್ಕಳಿಗೆ ವಚನಗಳ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ರಂಗ ನಿರ್ದೇಶಕ ಡಾ. ಬಸವಲಿಂಗಯ್ಯ ಹೇಳಿದ್ದಾರೆ.
ನಗರದ ಕಲಾಗ್ರಾಮದಲ್ಲಿ ವಚನ ಜ್ಯೋತಿ ಬಳಗದಿಂದ ಹಮ್ಮಿಕೊಂಡಿದ್ದ ಮಕ್ಕಳ ವಚನ ಮೇಳ -2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಹವೇ ದೇವಾಲಯ, ಭಗವಂತನಿಗೆ ಮಧ್ಯವರ್ತಿಗಳ ಅಗತ್ಯವಿಲ್ಲ ಎಂಬ ಸಂದೇಶವನ್ನು ಬಸವಣ್ಣ ನೀಡಿದ್ದಾರೆ. ಈ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಕ್ಕಳ ವಚನ ಮೇಳ ಸಹಕಾರಿಯಾಗಲಿ ಎಂದರು.
ಕನಕದಾಸ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಕಾ.ತ. ಚಿಕ್ಕಣ್ಣ ವಾತನಾಡಿ, ಸಂಸ್ಕೃತಿ ಕಟ್ಟುವ ಕೆಲಸ ಕಲಾಗ್ರಾಮದಲ್ಲಿ ನಡೆಯುತ್ತಿದೆ. ಮಕ್ಕಳು ವಚನಗಳನ್ನು ಹಾಡುವ ಮೂಲಕ ಸಂಸ್ಕೃತಿ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಬಣ್ಣಿಸಿದರು.
ವಚನಜ್ಯೋತಿ ಬಳಗ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, 28 ವಷರ್ಗಳಿಂದ ಮಕ್ಕಳ ವಚನ ಮೇಳ ನಡೆಸಿಕೊಂಡು ಬರಲಾಗುತ್ತದೆ. ಇದರ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಸವಾಜ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಆನಂದ್, ಬಳಗದ ಪದಾಧಿಕಾರಿಗಳಾದ ಗುರುಪ್ರಸಾದ್ ಕುಚ್ಚಂಗಿ, ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್, ರುದ್ರಪ್ಪ ದೇಸಾಯಿ, ಗಾಯಕರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವೀಣಾಮೂರ್ತಿ, ಕೆ.ಆರ್. ಸೌವ್ಯಾ, ರುದ್ರೇಶ್ ಇಸುವನಹಳ್ಳಿ, ಭದ್ರಾವತಿ ಅಕ್ಕಮಹಾದೇವಿ ಕೇಂದ್ರದ ಬಸವರಾಜಯ್ಯ ಉಪಸ್ಥಿತರಿದ್ದರು.