ವಿಜಯಪುರ: ಹನ್ನೆರಡನೇ ಶತಮಾನದಲ್ಲಿ ಸಮ ಸಮಾಜ ರಚಿಸುವುದು ಬಸವಾದಿ ಶರಣರ ಮೂಲ ಮಂತ್ರವಾಗಿತ್ತು. ಶರಣರು ಜಾತಿರಹಿತ ಸಮಾಜಕ್ಕೆ ಮನ್ನಣೆ ನೀಡಿ ಅದರಂತೆ ಬದುಕಿದರು. ಅನೇಕ ಮಠಗಳು ಇಂದು ಕೂಡ ಬಸವಣ್ಣನವರ ಸಿದ್ಧಾಂತ ಪ್ರಸಾರ ಮಾಡುತ್ತಿರುವುದು ಶ್ಲಾನೀಯ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಸುಭಾಸ ಗುಡಿಮನಿ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಮತ್ತು ಕಸಾಪ ನಗರ ಟಕಗಳ ಸಹಯೋಗದಲ್ಲಿ ಭಾನುವಾರ ಬಸವಣ್ಣನವರ ಕುರಿತ ಹಮ್ಮಿಕೊಂಡಿದ್ದ ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣನವರ ತತ್ವಗಳು ನಮ್ಮೆಲ್ಲರಲ್ಲಿ ರಕ್ತಗತವಾಗಿ ರೂಢಿಯಾಗಬೇಕು. ಅವರ ವಚನಗಳನ್ನು ಅರ್ಥ ಮಾಡಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಶರಣ ಚಿಂತಕ ಮಹಮ್ಮದ್ ಗೌಸ ಹವಾಲ್ದಾರ ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ವಿಷಯ ಕುರಿತ ಉಪನ್ಯಾಸ ನೀಡಿ, ವಿಶ್ವಕ್ಕೆ ವಚನದ ಮೂಲಕ ಜ್ಞಾನದ ಬೆಳಕು ನೀಡಿದ ವಿಶ್ವಗುರು ಬಸವಣ್ಣನವರು ವೈಚಾರಿಕ ಕಲ್ಪನೆ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ಕಾಯಕಕ್ಕೆ ಪ್ರಧಾನ ಸ್ಥಾನ ನೀಡಿದರು ಎಂದರು.
ಬಸವಣ್ಣನವರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಕುರಿತು ಡಾ. ಮಾಧವ ಗುಡಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಸವರಾಜ ಆಜೂರ, ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸುಭಾಶಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು.
ಅನ್ನಪೂರ್ಣ ಬೆಳ್ಳನವರ ನಿರೂಪಿಸಿದರು. ಮಹಿಳಾ ವಿವಿಯ ಸಂಗೀತ ವಿಭಾಗದ ಪೂಜಾ ಅಂಗಡಿ, ರಾಗಿಣಿ ಪೂಜಾರ, ಚೈತ್ರಾವತಿ ನೀಲಪ್ಪನವರ ವಚನ ಗಾಯನ ಮಾಡಿದರು.
ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ವೈ.ಟಿ. ಪಾಟೀಲ, ಸಿ.ಎಸ್. ಝಳಕಿ, ಆನಂದ ಕೆಂಬಾವಿ ಅವರಿಗೆ ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪ್ರಾಚಾರ್ಯ ಸಿದ್ರಾಮಯ್ಯ ಲಕ್ಕುಂಡಿಮಠ, ವಿದ್ಯಾವತಿ ಅಂಕಲಗಿ, ರಾಜೇಸಾಬ ಶಿವನಗುತ್ತಿ, ಪ್ರೊ. ಸಿದ್ದು ಸವಳಸಂಗ, ಅಹಮ್ಮದ ವಾಲೀಕಾರ, ಟಿ.ಆರ್. ಹಾವಿನಾಳ, ಶಾಂತಾ ವಿಭೂತಿ, ಶೇಷರಾವ ಮಾನೆ, ಎಂ.ಎಂ. ಕಲಾಸಿ, ಮಡಿವಾಳಮ್ಮ ನಾಡಗೌಡ, ಸುರೇಶ ಪೂಜಾರಿ, ಸಂಗಮೇಶ ಕರೆಪ್ಪಗೋಳ, ಗಂಗಮ್ಮ ರೆಡ್ಡಿ, ಪ್ರಕಾಶಸಿಂಗ ರಜಪೂತ, ಚೈತನ್ಯ ಮುದ್ದೇಬಿಹಾಳ, ಲಕ್ಷಿ$್ಮ ಬಿರಾದಾರ, ಜಿ.ಎಸ್. ಬಳ್ಳೂರ ಮತ್ತಿತರರಿದ್ದರು.