ಮದ್ದೂರು ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಅವರನ್ನು ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್ ಅಭಿನಂದಿಸಿದರು. ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಜಿ.ಮಹಾಂತಪ್ಪ, ಅಮೃತಿ ಶೇಖರ್, ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ ಇದ್ದರು. 
ಜಿಲ್ಲೆ

ಬಸವಣ್ಣ ವಿಶ್ವ ಸಂವಿಧಾನದ ಶಿಲ್ಪಿ

ಮದ್ದೂರು: ಸಮಸಮಾಜ ನಿರ್ಮಾಣ ಮಾಡಲು ಸಾಮಾಜಿಕ ಕ್ರಾಂತಿ ನಡೆಸಿದ ವಿಶ್ವ ಗುರು ಬಸವಣ್ಣನ ಆದರ್ಶಗಳನ್ನು ಯಾರಿಂದಲೂ ಮರೆಮಾಚಲು ಸಾಧ್ಯವಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಸಭೆಯಲ್ಲಿ ಮದ್ದೂರು ತಾಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಅವರನ್ನು ಅಭಿನಂದಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಶೋಷಿತ ಸಮುದಾಯವನ್ನು ಒಪ್ಪಿ ಅಪ್ಪಿಕೊಂಡ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಸರ್ವರನ್ನೂ ಸಮಾನವಾಗಿ ಕಂಡ ಮಹಾಮಾನವತಾವಾದಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾತ್ಮ ಬಸವೇಶ್ವರರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆ ರಚನೆಯಾಗಿದೆ. ಬಸವಣ್ಣ ವಿಶ್ವ ಸಂವಿಧಾನದ ಶಿಲ್ಪಿಯಾಗಿದ್ದಾರೆ. ಶಿವಶರಣರ ಆದರ್ಶಗಳನ್ನು ನವಸಮಾಜಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆ ಜಾಗತಿಕ ಲಿಂಗಾಯತ ಮಹಾಸಭೆಯದ್ದಾಗಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ನೂತನ ತಾಲೂಕು ಅಧ್ಯಕ್ಷ ಶಿವಾನಂದ ಮಾತನಾಡಿ, ಮಹಾಸಭಾದ ಮೂಲಕ ಲಿಂಗಾಯತ ಸಮಾಜವನ್ನು ಸಂಘಟನೆ ಮಾಡುವ ಜತೆಗೆ ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರನ್ನು ಗರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಸಭಾ ಕೇವಲ ಲಿಂಗಾಯತ ಸಮಾಜದ ಕಾರ್ಯಕ್ರಮಕ್ಕೆ ಸಿಮಿತವಾಗದೆ ಎಲ್ಲ ವರ್ಗದವರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮ ರೂಪಿಸಲು ಮುಂದಿನ ದಿನಗಳಲ್ಲಿ ಮಹಾಸಭಾದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಪದಾಧಿಕಾರಿಗಳ ಆಯ್ಕೆ: ತಾಲೂಕು ಜೆಎಲ್‌ಎಂ ಅಧ್ಯಕ್ಷರಾಗಿ ಶಿವಾನಂದ, ಹಿರಿಯ ಉಪಾಧ್ಯಕ್ಷರಾಗಿ ಎಚ್.ಕೆ.ಕೆಂಪಣ್ಣ, ನಿಂಗಪ್ಪ, ಉಪಾಧ್ಯಕ್ಷರಾಗಿ ಎಚ್.ಎಸ್.ಮಹದೇವಸ್ವಾಮಿ, ಕೆ.ಎಂ.ವಿಜಯಮಹಾಲಿಂಗಪ್ಪ ಬೂದಗುಪ್ಪೆ, ಎಂ.ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಕೆಂಪರಾಜು ಎಸ್.ಐ.ಹೊನ್ನಲಗೆರೆ, ಸಹಕಾರ್ಯದರ್ಶಿಯಾಗಿ ಎಚ್.ಪಿ.ಸ್ವಾಮಿ ಹೊನ್ನಾಯಕನಹಳ್ಳಿ, ಮಹದೇವಸ್ವಾಮಿ.ಎಚ್.ಕೆ.ಎಚ್.ಹೊಸಹಳ್ಳಿ, ಪ್ರಕಾಶ್. ಗೂಳೂರು, ಖಜಾಂಚಿಯಾಗಿ ಮರಿಲಿಂಗಪ್ಪ ಬೂದಗುಪ್ಪೆ, ನಿರ್ದೇಶಕರಾಗಿ ಶಿವಸ್ವಾಮಿ ಭೀಮನಕೆರೆ, ಎಚ್.ಸಿ.ಸಿದ್ದಪ್ಪ ಹುಲಿಕೆರೆ, ಮಹದೇವಸ್ವಾಮಿ ಬೆಳ್ಳೂರು, ಶಿವಕುಮಾರ್ ಕೆ.ಎಂ.ದೊಡ್ಡಿ, ಸುರೇಶ್ ಸಿ.ಹರಳಹಳ್ಳಿ, ಚಂದ್ರಕೀರ್ತಿ ಎಸ್.ಅರೆಚಾಕನಹಳ್ಳಿ, ದಿಲೀಪ್ ಬೊಪ್ಪಸಂದ್ರ, ಆರ್.ಮಹೇಶ್ ಅಣ್ಣೂರು, ಬಿ.ಎಂ.ಶಿವಕುಮಾರ್ ಭುಜವಹಳ್ಳಿ, ಶಿವಪ್ಪ ಎ.ಹರಳಹಳ್ಳಿ, ಜಿಲ್ಲಾ ನಿರ್ದೇಶಕರಾಗಿ ಶಿವಲಿಂಗಪ್ಪ ಮೆಣಸಗೆರೆ, ನಟರಾಜ್ ಹುಲಿಕೆರೆ, ಮಹದೇಪ್ಪ ಎಚ್.ಹೊಸಹಳ್ಳಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜೆಎಲ್‌ಎಂ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಉಪಾಧ್ಯಕ್ಷರಾದ ಜಿ.ಮಹಾಂತಪ್ಪ, ಅಮೃತಿ ಶಂಕರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಶಿವರುದ್ರಸ್ವಾಮಿ, ನಿರ್ದೇಶಕ ಮೆಣಸಗೆರೆ ಶಿವಲಿಂಗಯ್ಯ ಉಪಸ್ಥಿತರಿದ್ದರು.