ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಣ್ಣನವರು ಕನ್ನಡದ ಕೀತಿರ್ಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದ ಮಹಾ ಮಾನವತಾವಾದಿ. ಅವರು ವಿಶ್ವ ಪ್ರೇಮದಲ್ಲಿ ಜಗತ್ತನ್ನಾಳುವ ದಿವ್ಯ ಶಕ್ತಿ ಇದೆ ಎಂಬುದನ್ನು ತೋರಿಸಿದರು ಎಂದು ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಪ್ರೊ. ಶಶಿಧರ ತೋಡಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದ ಶಿಕ್ಷಣ ಮಂಟಪವು ಶ್ರೀ ಸಿದ್ಧರಾಮೇಶ್ವರ ಶಿಣ ಕಾಲೇಜಿನ ಸಹಯೋಗದಲ್ಲಿ ಬಸವ ಜಯಂತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಬಸವಣ್ಣನವರ ಶೈಣಿಕ ಚಿಂತನೆಗಳು ಉಪನ್ಯಾಸ ಹಾಗೂ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರು ಬಸವಣ್ಣನವರು ಎಲ್ಲರಂತೆ ಬದುಕಲಿಲ್ಲ. ಎಲ್ಲರಿಗಾಗಿ ಬದುಕಿದ ಮಹಾನ್ ಚೇತನ. ಕಾಯಕ ಮತ್ತು ದಾಸೋಹ ವಿಶ್ವ ಸಂಸತಿಗೆ ಬಸವಣ್ಣನವರ ಎರಡು ಮಹಾನ್ ಕೊಡುಗೆಗಳು. ಹೀಗಾಗಿ ಈ ಎರಡನ್ನು ಕಡ್ಡಾಯಗೊಳಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣ ಎಲ್ಲ ಜಾತಿ, ಮತ, ಪಂಥದವರನ್ನು ಭೇದವಿಲ್ಲದೆ ಸರ್ವರನ್ನು ಅಪ್ಪಿಕೊಂಡು ಬದುಕಿದ ವಿಶ್ವ ಮಾನವರು. ಅನುಭವ ಮಂಟಪದ ಮೂಲಕ ಸಮ ಸಮಾಜ ನಿಮಿರ್ಸಿ, ಪ್ರಜಾಪ್ರಭುತ್ವದ ಮೂಲ ಪುರುಷ ಎನಿಸಿಕೊಂಡರು. ಬಾಲ್ಯದಿಂದಲೇ ಅವರಲ್ಲಿ ಚಿಕಿತ್ಸಕ ಗುಣವಿತ್ತು ಎಂದರು.
ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಉಪನ್ಯಾಸ ನೀಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲ್ಲ ಕಾಯಕ ಜೀವಿಗಳಿಗೆ ಅರ ಕಲಿಸಿ ಅರಿವು ಮೂಡಿಸಿ, ವಚನ ರಚಿಸಲು ಪ್ರೇರಣೆ ನೀಡಿದರು. ಸ್ತ್ರೀಯರಿಗೆ ಶಿಣ ನೀಡುವ ಮೂಲಕ 33 ಜನ ಮಹಿಳೆಯರು ವಚನಗಾತಿರ್ಯರಾಗಲು ಸಾಧ್ಯವಾಯಿತು ಎಂದರು.
ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ಮಾತನಾಡಿದರು. ಡಾ. ಗಿರಿಜಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಯಶೀಲಾ ವಿ.ಎಚ್, ಎಸ್.ಎಂ. ಕೊಟಬಾಗಿ, ಪ್ರೊ. ಉಮಾ ಮಠ, ವಿಜಯಲಕ್ಷಿ$್ಮ ಕಲ್ಯಾಣಶೆಟ್ಟರ, ಇತರರು ಇದ್ದರು.
ಡಾ. ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಂಕರ ಚಕ್ರವತಿರ್ ನಿರೂಪಿಸಿದರು. ಪ್ರೊ. ಪಿ.ಎಸ್. ಇಲಕಲ್ ವಂದಿಸಿದರು.