ಹುಣಸೂರು: ಜಗಜ್ಯೋತಿ ಬಸವಣ್ಣ ವಿಶ್ವದ ಮಹಾಬೆಳಗು. ಅವರ ಆದರ್ಶಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ ಎಂದು ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು.
ಮಠದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಆರ್ಶೀವಚನ ನೀಡಿದ ಅವರು, ಬಸವಣ್ಣನವರ ಬದುಕು, ಆದರ್ಶ ಗುಣಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಅವರ ವಿಚಾರಧಾರೆಗಳು ವಿಶ್ವಮಾನ್ಯವಾಗಿವೆ. ಅವರೊಬ್ಬ ವಿಶ್ವದ ಮಹಾ ಬೆಳಗು. ಅವರ ಜೀವನ ಎಲ್ಲರ ಭವ್ಯತೆಯನ್ನು ಮೇಳೈಸುವ ಮಹಾ ಸಂದೇಶವಾಗಿದೆ ಎಂದರು.
ಮನುಜನ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸುವ ಮಹಾಶಕ್ತಿ ಬಸವಣ್ಣ ನೀಡಿದ ವಚನದಲ್ಲಿದೆ. 12ನೇ ಶತಮಾನದ ಸಾಮಾನ್ಯರಿಂದ ಅಸಮಾನ್ಯರವರೆಗೆ ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರವರೆಗೂ ಅರ್ಥವಾಗುವ ರೀತಿಯಲ್ಲಿ ಜೀವನದ ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ ಎಂದರು.
ಮಠದ ವ್ಯವಸ್ಥಾಪಕಿ ಶಿಲ್ಪಾ ಮಂಜುನಾಥ್, ಭರತ್, ಮಲ್ಲೇಶ್, ಮಂಜುನಾಥ್, ಮಮತಾ, ವಸತಿ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.