ಮಾಗಡಿ : ಬಸವಣ್ಣನವರ ಆದರ್ಶ ಗುಣಗಳು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಲೂರು ಸರಕಾರಿ ಬಸ್ ನಿಲ್ದಾಣದಲ್ಲಿ ಚಿಲುಮೆ ಮಠ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಅವರು ಸಮಾಜ ಸುಧಾರಕರಾಗಿ ತತ್ವಜ್ಞಾನಿಯಾಗಿದ್ದರು.
ಚನಗಳ ಮೂಲಕ ಸಾಮಾಜಿಕ ಜಾಗೃತಿ ಹರಡಿಸಿದರು. ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶವಾಗಿದೆ. 12ನೇ ಶತಮಾನದಲ್ಲಿ ಎಲ್ಲ ಜಾತಿ ಪ್ರತಿನಿಧಿಗಳನ್ನು ಒಳಗೊಂಡ ಅನುಭವ ಮಂಟಪ ಸಚಿವ ಸಂಪುಟವನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಜಾತಿ ಪದ್ಧತಿ, ಗಂಡು- ಹೆಣ್ಣು ಬೇದ ಭಾವ, ಬಡವ- ಶ್ರೀಮಂತ, ಮೂಢನಂಭಿಕೆಗಳ ವಿರುದ್ಧ ಹೋರಾಟ ಮಾಡಿದ್ದರು ಎಂದರು.
ವೀರಶೈವ ಮಹಾಸಭಾ ಅಧ್ಯಕ್ಷ ಎಸ್‌ಸಿಬಿಎಸ್ ಶಿವರುದ್ರಯ್ಯ ಮಾತನಾಡಿ, ವಿಶ್ವ ಕಂಡ ಶ್ರೇಷ್ಠ ಸುಧಾರಕರು ಬಸವಣ್ಣ. ಅವರ ವಿಚಾರಧಾರೆ ಸರ್ವ ಕಾಲಕ್ಕೂ ಶ್ರೇಷ್ಠವಾಗಿವೆ. ವಚನಗಳು ನಿಜ ಜೀವನದಲ್ಲಿ ಆಚರಣೆಗೆ ತಂದರೆ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂಬ ಆಶಾ ಭಾವನೆ ಅಂದಿನ ಜಡ್ಡುಗಟ್ಟಿದ ಸಮಾಜಿಕ ಸ್ಥಿತಿಯಲ್ಲಿ ಸಾಮಾಜಿಕ, ಆರ್ಥಿಕ, ಲಿಂಗ ಅಸಮಾನತೆ ಬಗ್ಗೆ ಜಾಗೃತಿ ಮೂಡಿಸಿದವರು ಬಸವಣ್ಣ. ಸಾಮಾಜಿಕ ತಿಳಿವಳಿಕೆ ಕುರಿತು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ರಚಿಸಿದ ಇವರ ವಚನಗಳು ಪ್ರಸಿದ್ಧಿ ಪಡೆದಿದೆ.
ಟ್ಟಿನ ಆಧಾರದಲ್ಲಿ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ನಿಗದಿಯಾಗಬಾರದೆಂದು ಬಲವಾಗಿ ಪ್ರತಿಪಾದಿಸಿದ್ದರು. ಇದರಿಂದಾಗಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಬಸವಣ್ಣ ಅವರ ವಿಚಾರಧಾರೆ ಉತ್ತಮ ಅಡಿಪಾಯ ನೀಡಿತು ಎಂದರು.
ತಾಪಂ ಮಾಜಿ ಸದಸ್ಯ ಶಂಕರಪ್ಪ ಮಾತನಾಡಿ, ತುಳಿತಕ್ಕೊಳಗಾದವರಿಗೆ ಸಮಾನತೆ ನೀಡಿದ ಮಹಾತ್ಮ ಬಸವಣ್ಣ. ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಜಗತ್ತಿಗೆ ಮಾನವೀಯತೆ ಸಂದೇಶ ಸಾರಿದರು. ಜಗತ್ತಿನಲ್ಲಿಯೇ ಮೊದಲು ಸ್ತ್ರೀಯರಿಗೆ ಸ್ಥಾನಮಾನ ದೊರಕಿಸಿ ಕೊಟ್ಟು ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು ಎಂದರು.
ಬಿಎಂಟಿಸಿ ಮಾಜಿ ನಿರ್ದೇಶಕ ಕೆ.ಪಿ.ಬೃಂಗೇಶ್, ಎನ್‌ಡಿಎ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ವೀರಶೈವ ಮುಖಂಡ ಎಸ್‌ಸಿಬಿಎಸ್ ಮಂಜುನಾಥ್, ಡೇರಿ ಅಧ್ಯಕ್ಷ ನಾಗರುದ್ರ ಶರ್ಮ, ಚಿಲುಮೆ ಮಠ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಮಹಂತೇಶ್, ಸಹಕಾರ್ಯದರ್ಶಿ ಅದರಂಗಿ ಎ.ಆರ್.ಮೃತ್ಯುಂಜಯ ಸ್ವಾಮಿ, ಅದರಂಗಿ ಮಾಜಿ ಉಪಾಧ್ಯಕ್ಷ ಎ.ಎಂ. ರವಿಕುಮಾರ್, ಎ.ಜಿ.ಶಿವಕುಮಾರ್, ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಎಲ್.ಜಿ. ಮಹದೇವಯ್ಯ, ದಯಾನಂದ್, ನಿರ್ದೇಶಕ ಚಂದ್ರಣ್ಣ, ನಂದೀಶ್, ವಿರುಪಾಕ್ಷಯ್ಯ, ಈಶ್ವರಪ್ಪ, ಉಮೇಶ್, ಕುದೂರು ಯತೀಶ್ ಇತರರು ಇದ್ದರು.