ಜಿಲ್ಲೆ

ಬಸವನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ಹಳಿಯಾಳ ರಸ್ತೆಯ ಬಸವನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ 5ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏ. 13ರಿಂದ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಏ. 13 ಮತ್ತು 14ರಂದು ಸಂಜೆ 7.30 ಗಂಟೆಗೆ ಹುಣಸಿಕಟ್ಟೆಯ ಶ್ರೀ ಬಸವರಾಜ ದೇವರು ಅವರಿಂದ ಪುರಾಣ ಪ್ರವಚನ ಇರಲಿದೆ.

ಏ. 15ರಂದು ಬೆಳಗ್ಗೆ 4 ಗಂಟೆಗೆ ಅಮ್ಮನವರಿಗೆ ರುದ್ರಾಭಿಷೇಕ, ಕುಂಭಾಭಿಷೇಕ, 6.30ಕ್ಕೆ ಹೂವಿನ ಅಲಂಕಾರ, 7 ಗಂಟೆಗೆ ಮಹಾಮಂಗಳಾರತಿ, ಉಡಿ ತುಂಬುವುದು, ಪಡ್ಡಲಗಿ ಸೇವೆ ನಡೆಯಲಿದೆ. 8.30ಕ್ಕೆ ಪೂರ್ಣಕುಂಭ, ಆರತಿ ಮತ್ತು ಪಲ್ಲಕ್ಕಿಯೊಂದಿಗೆ ದೇವಿಯ ಶೋಭಾಯಾತ್ರೆ ಜರುಗುವುದು. 1 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಇರಲಿದೆ. ಸಂಜೆ 7 ಗಂಟೆಗೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಜರುಗಲಿದೆ. ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿ, ಶ್ರೀ ವೀರಭದ್ರೇಶ್ವರ ಆದರ್ಶ ಸಂಘ ಮತ್ತು ಬಸವನಗರದ ಹಿರಿಯರು ವಿನಂತಿಸಿದ್ದಾರೆ.