ಜಿಲ್ಲೆ

ಯುವಕರು ದೇಶಪ್ರೇಮ ಬೆಳೆಸಿಕೊಳ್ಳಿ

ಹುಮನಾಬಾದ್: ಸಂಗೊಳ್ಳಿ ರಾಯಣ್ಣ ಸೇರಿ ದೇಶದ ವೀರ ಪುತ್ರರ ಶೌರ್ಯ, ಪ್ರಾಮಾಣಿಕತೆ ಹಾಗೂ ದೇಶಪ್ರೇಮ ಯುವಕರು ಮೈಗೂಢಿಸಿಕೊಳ್ಳಬೇಕು ಎಂದು ಜಹೀರಾಬಾದ್ ಮಲ್ಲಯ್ಯಗಿರಿ ಆಶ್ರಮದ ಶ್ರೀ ಡಾ.ಬಸಲಿಂಗ ಅವಧೂತ ನುಡಿದರು. ಸುಲ್ತಾನಾಬಾದ್ ವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯಿಂದ ಬುಧವಾರ ಏರ್ಪಡಿಸಿದ್ದ ರಾಯಣ್ಣ ಜಯಂತ್ಯುತ್ಸವ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರ ವಿರುದ್ಧದ ಸ್ವಾತಂತ್ರÈ ಹೋರಾಟದಲ್ಲಿ ರಾಯಣ್ಣ ಮಾಡಿದ ಹೋರಾಟ ಅಪ್ರತಿಮ ಎಂದರು. ಯುವಕರು ರಾಯಣ್ಣನಂತೆ ಜೀವನ ಸಾಗಿಸಬೇಕು. ದುಶ್ಚಟಗಳ ದಾಸರಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಮದ ಎಲ್ಲ ಸಮಾಜದ ಜನರು ಸಹೋದರರಂತೆ ಒಗ್ಗಟ್ಟಿನಿಂದ ಬದುಕು ಸಾಗಿಸಬೇಕು ಎಂದರು. ಪ್ರಮುಖರಾದ ರಮೇಶ ರಂಜೇರಿ, ಶ್ರೀಕಾಂತ ವಗ್ಗೆ, ಅಶೋಕ ಚಿಂಚೋಳೆ, ವೆಂಕಟರಾವ ಪಾಟೀಲ್, ಬಲವಂತ ಉಪ್ಪಾರ, ಶರಣಪ್ಪ ರಂಜೇರಿ, ಮಲ್ಲಿಕಾರ್ಜುನ ಪಾಟೀಲ್ ಮುಗನೂರ, ವಿಜಯಕುಮಾರ ಕಡಗಂಚಿ ಇತರರಿದ್ದರು.