ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಸಮಾರಂಭವನ್ನು ಡಾ.ಎಚ್.ವಿ. ವಾಸು ಉದ್ಘಾಟಿಸಿದರು. ಬಸವರಾಜ ಕೋರಕೆ, ಶ್ರೀಕಾಂತ ಬಡದಾಳೆ, ರವೀಂದ್ರ ಕೋಳಕುರ, ಸಿದ್ದಪ್ಪ ಮುಲಗೆ, ಸುನೀಲ ಹುಡಗಿ ಇತರರಿದ್ದರು. 
ಜಿಲ್ಲೆ

ನೈತಿಕತೆ ಪಾಠ ಹೇಳಿಕೊಟ್ಟ ನೆಲ ಕಲ್ಯಾಣ

ಬಸವಕಲ್ಯಾಣ: ಜಗತ್ತಿಗೆ ನೈತಿಕತೆ, ವೈಚಾರಿಕತೆ ಮತ್ತು ಬೌದ್ಧಿಕತೆಯ ಪಾಠ ಹೇಳಿ ಕೊಟ್ಟ ನೆಲ ಕಲ್ಯಾಣ. ಬಸವಣ್ಣ, ಅಲ್ಲಮ, ಅಕ್ಕ ಇವರೆಲ್ಲರೂ ಸೈದ್ಧಾಂತಿಕ ಚಿಂತನೆಯನ್ನು ಕಟ್ಟಿ ಕೊಟ್ಟಿದ್ದಾರೆ ಎಂದು ಬೆಂಗಳೂರಿನ ಪತ್ರಕರ್ತ, ಚಿಂತಕ ಡಾ. ಎಚ್.ವಿ.ವಾಸು ಹೇಳಿದರು.

ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ರೀ-ಅಶ್ಯೂರ ಫೌಂಡೇಷನ್ ಸಹಯೋಗದಲ್ಲಿ ರೀ-ಅಶ್ಯೂರ ಫೌಂಡೇಷನ್ ಲೋಗೋ ಬಿಡುಗಡೆ ಮತ್ತು ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕುರಿತು ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಸಮಾರಂಭ ಉದ್ಘಾಟಿಸಿದ ಅವರು, ವಚನಕಾರರ ವಿಚಾರ ಧಾರೆ, ಬೌದ್ಧಿಕ ನಿಲುಗಳ ಪ್ರಚಾರ ಪ್ರಸಾರದ ಜತೆಗೆ ಇಲ್ಲಿಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.

ರೀ-ಅಶ್ಯೂರ ಫೌಂಡೇಷನ್ ಸದಸ್ಯ ರವೀಂದ್ರ ಕೋಳಕುರ ಮಾತನಾಡಿ, ಕಲ್ಯಾಣದ ಮಾತೃ ಸಂಸ್ಥೆಯಾದ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಪ್ರಗತಿಯ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ರೀ-ಅಶ್ಯೂರ ಫೌಂಡೇಷನ್ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಪತ್ರಕರ್ತ ಸಿದ್ದಪ್ಪ ಮುಲಗೆ, ಕಲಬುರಗಿಯ ರಂಗಕರ್ಮಿ ಸುನೀಲ ಹುಡಗಿ, ಡಾ.ಶಾಂತಲಾ ಪಾಟೀಲ್, ಜಗದೇವಿ ಜವಳಗೆ, ಶ್ರೀನಿವಾಸ ಉಮಾಪುರೆ, ಅಶೋಕರಡ್ಡಿ ಗದಲೇಗಾಂವ, ಸಚ್ಚಿನ ಬಿಡವೆ, ಪವನ ಪಾಟೀಲ್, ವಿವೇಕಾನಂದ ಶಿಂಧೆ ಇತರರಿದ್ದರು.

ಡಾ.ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಚನ್ನಬಸಪ್ಪಗೌರ ವಂದಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.