ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ನಿಮಿತ್ತ ಬುಧವಾರ ಸಂಜೆ ಬಸವಕಲ್ಯಾಣದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿವೈಎಸ್‌ಪಿ ಜೆ.ಎಸ್.ನ್ಯಾಮೇಗೌಡ, ಸಿಪಿಐಗಳಾದ ಅಲಿಸಾಬ್, ವಿಜಯಕುಮಾರ, ಗುರು ಪಾಟೀಲ್, ಪಿಎಸ್‌ಐಗಳಾದ ಅಂಬರೀಷ್ ವಾಗ್ಮೋಡೆ, ಶಿವಪ್ಪ ಮೇಟಿ, ನಂದಕುಮಾರ ಮುಳೆ, ನಾಗೇಂದ್ರ, ಸುವರ್ಣಾ ಮಲಶೆಟ್ಟಿ, ರೇಣುಕಾ ಇತರರಿದ್ದರು. 
ಜಿಲ್ಲೆ

ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಶಿಸ್ತು ಕ್ರಮ

ರಾಜು ಯಮಕನಮರಡಿ

ಬಸವಕಲ್ಯಾಣ: ಗಣೇಶ ವಿಜರ್ಸನೆ ಹಾಗೂ ಈದ್ ಮಿಲಾದ್ ನಿಮಿತ್ತ ನಗರದಲ್ಲಿ ಬುಧವಾರ ಸಂಜೆ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ನಡೆಯಿತು.

ಗಾಂಧಿ ವೃತ್ತದ ಠಾಣೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದ ಮೂಲಕ ಲಕ್ಷ್ಮೀ ಕ್ರಾಸ್, ಬನಶಂಕರಿ ಗಲ್ಲಿ, ಈಶ್ವರ ನಗರ, ಧರ್ಮಪ್ರಕಾಶ ಗಲ್ಲಿ, ಕಾಳಿ ಗಲ್ಲಿ, ಕೋಟೆ ಮೂಲಕ ಠಾಣೆಗೆ ಮರಳಿತು.

ಪಥ ಸಂಚಲನಕ್ಕೆ ಚಾಲನೆ ನೀಡಿದ ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್ ಮಾತನಾಡಿ, ನಗರದಲ್ಲಿ ಗುರುವಾರ ಸಂಜೆ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐಗಳಾದ ಅಲಿಸಾಬ್, ವಿಜಯಕುಮಾರ, ಗುರು ಪಾಟೀಲ್, ಪಿಎಸ್‌ಐಗಳಾದ ಅಂಬರೀಷ್ ವಾಗ್ಮೋಡೆ, ಶಿವಪ್ಪ ಮೇಟಿ, ನಂದಕುಮಾರ ಮುಳೆ, ನಾಗೇಂದ್ರ, ಸುವರ್ಣಾ ಮಲಶೆಟ್ಟಿ, ರೇಣುಕಾ ಇತರರಿದ್ದರು.