ಬಸವಕಲ್ಯಾಣದಲ್ಲಿ ಪಶುಪಾಲನಾ ಮತ್ತು ಪಶು ಸೇವಾ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್​ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಮೆಕ್ಕೆ ಜೋಳ ಮತ್ತು ಮೇವಿನ ಬೀಜದ ಮಿನಿ ಕಿಟ್ ವಿತರಿಸಲಾಯಿತು. ಡಾ.ರವೀಂದ್ರನಾಥ, ಎಸ್.ಎಸ್. ಹಿರೇಮಠ, ಮಹಾಂತೇಶ ಡಬಾಲಿ, ಅಜಿತ್ ಜಾಧವ್ ಇತರರಿದ್ದರು. 
ಜಿಲ್ಲೆ

ಸೌಲಭ್ಯಗಳನ್ನು ಸಮರ್ಪಕ ಬಳಸಿಕೊಳ್ಳಿ

ಬಸವಕಲ್ಯಾಣ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪಶು ಪಾಲನೆ ಮತ್ತು ಪಶು ಸೇವಾ ಇಲಾಖೆ ಅಧಿಕಾರಿ ಡಾ.ರವೀಂದ್ರನಾಥ ಹೇಳಿದರು.

ಪಶುಪಾಲನಾ ಮತ್ತು ಪಶು ಸೇವಾ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್​ನಿಂದ ನಗರದ ಪಶು ಆಸ್ಪತ್ರೆಯಲ್ಲಿ ಶುಕ್ರವಾರ ಹಾಲು ಪೂರೈಸುವ ರೈತರಿಗೆ ಮೆಕ್ಕೆ ಜೋಳ ಮತ್ತು ಮೇವಿನ ಬೀಜದ ಮಿನಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೆ.೧ರಿಂದ ಡಿ.೩೧ರವರೆಗೆ ೨೧ನೇ ರಾಷ್ಟ್ರೀಯ ಜಾನುವಾರ ಗಣತಿ ನಡೆಯಲಿದ್ದು, ಗಣತಿದಾರರು ಮನೆಗೆ ಬಂದಾಗ ರೈತರು ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ರೈತರಿಗೆ ಬೀಜವನ್ನು ಯೋಜನೆಯ ಜಿಲ್ಲಾ ಹೈನುಗಾರಿಕಾ ನಿರ್ದೇಶಕ ಎಸ್.ಎಸ್. ಹಿರೇಮಠ ವಿತರಿಸಿದರು. ಕೃಷಿ ಮೇಲ್ವಿಚಾರಕ ಮಹಾಂತೇಶ ಡಬಾಲಿ, ರಾಮತೀರ್ಥ ಕೆ., ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಅಜಿತ್ ಜಾಧವ್ ಹಾಗೂ ಸದಸ್ಯರು ಇದ್ದರು.