ಕೊಪ್ಪಳ: ಎಲ್ಲ ಧರ್ಮಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಹಾಗಂತ ಧರ್ಮ ನಾಶ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಎಲ್ಲ ಧರ್ಮಗಳು ಸಮಾನ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಯಾರೇ ಆಗಲಿ ಇನ್ನೊಂದು ಧರ್ಮದ ಬಗ್ಗೆ ಟೀಕಿಸಬಾರದು. ನಮ್ಮದು ಬಹು ಧರ್ಮಗಳ ರಾಷ್ಟ್ರ. ಎಲ್ಲ ಧರ್ಮಗಳಿಗೆ ತನ್ನದೇ ಮಾನ್ಯತೆ ಇದೆ. ಭಿನ್ನಾಭಿಪ್ರಾಯ ಇದ್ದ ಮಾತ್ರಕ್ಕೆ ಧರ್ಮವನ್ನು ದ್ವೇಷಿಸುವುದು, ತೇಜೋವಧೆ ಆಗುವಂತೆ ಮಾತನಾಡುವುದು ಡರವಲ್ಲ. ಎಲ್ಲ ಧರ್ಮದ ದಾರ್ಶನಿಕರು ಒಳ್ಳೆಯದನ್ನೇ ಹೇಳಿದ್ದಾರೆ. ಅದನ್ನು ಪಾಲಿಸೋಣ. ಕೆಟ್ಟ ಅಂಶಗಳನ್ನು ಬಿಟ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕೊಪ್ಪಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸನಾತನ ಧರ್ಮದ ವಿರುದ್ಧ ನಿಂದಿಸಿದವರ ನಡೆಗೆ ಖಂಡನೆ ವ್ಯಕ್ತಪಡಿಸಿದರು.