ಹಗರಿಬೊಮ್ಮನಹಳ್ಳಿ ತಾಲೂಕು ಕಛೇರಿಯಲ್ಲಿ ಡಾ.ಪಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ 144ನೇ ಜನ್ಮದಿನ ಆಚರಣೆ ನಡೆಯಿತು. ಕಂದಾಯ ನಿರೀಕ್ಷಕರಾದ ಪುಷ್ಪ, ನಾಗರಾಜ, ಉಪತಹಸೀಲ್ದಾರ್ ಶಿವಕುಮಾರ್ ಗೌಡ ಇದ್ದರು. 
ಜಿಲ್ಲೆ

ಬಸವಾದಿ ಶಿವಶರಣರ ತತ್ವಗಳೇ ಆದರ್ಶ

ಹಗರಿಬೊಮ್ಮನಹಳ್ಳಿ: ಡಾ.ಪಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ 144ನೇ ಜನ್ಮ ದಿನಾಚರಣೆಯನ್ನು ತಾಲೂಕು ಕಛೇರಿಯಲ್ಲಿ ಆಚರಿಸಲಾಯಿತು.

ಉಪತಹಸೀಲ್ದಾರ್ ಶಿವಕುಮಾರ್ ಗೌಡ ಮಾತನಾಡಿ, ಶರಣರ ವಚನಗಳು ಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಲು ಪ್ರಯತ್ನಿಸಿದ್ದರು. ಮಹಾನ್ ಸಂತ, ವಚನ ಗುಮ್ಮಟ, ವಚನ ಪಿತಾಮಹ ಎಂದೇ ಹೆಸರುವಾಸಿ.

ಬಸವಾದಿ ಶಿವಶರಣರ ತತ್ವ ಸಂದೇಶಗಳನ್ನು ಉಸಿರಾಗಿಸಿಕೊಂಡು ಬದುಕಿನುದ್ದಕ್ಕೂ ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಇವರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನ ಎಂದು ಆಚರಿಸಲಾಗುತ್ತದೆ ಎಂದರು. ಕಂದಾಯ ನಿರೀಕ್ಷಕರಾದ ಪುಷ್ಪ, ನಾಗರಾಜ ಇದ್ದರು.