ಜಿಲ್ಲೆ

ಬಸವದಳದಲ್ಲಿ ಫ.ಗು ಹಳಕಟ್ಟಿ ಸ್ಮರಣೆ

Gadag - Shivanand Hiremath

ಗದಗ: ೧೨ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಇಂದು ಇಡೀ ಜಗತ್ತಿಗೆ ಜ್ಞಾನಾರ್ಚನೆ ಮಾಡುತ್ತಿವೆ, ಇಂಥ ಅದ್ವಿತೀಯ ವಚನಗಳು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದವು, ಅವುಗಳನ್ನು ಶೋಧಿಸಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಫ.ಗು ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಸಿದ್ಧಲಿಂಗೇಶ ಸಜ್ಜನಶೆಟ್ಟರ ನುಡಿದರು.
ಅವರು ಇತ್ತೀಚೆಗೆ ನಗರದ ಶಿವಾನಂದ ನಗರದಲ್ಲಿರುವ ಬಸವ ಮಂಟಪದಲ್ಲಿ ಜರುಗಿದ ೧೬೦೦ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಫ.ಗು ಹಳಕಟ್ಟಿಯವರ ಜೀವನ-ಸಾಧನೆಗಳ ಕುರಿತು ಉಪನ್ಯಾಸ ನೀಡಿ,
ದಕ್ಷ ವಕೀಲರಾಗಿದ್ದ ಅವರು ನಿರಾತಂಕವಾಗಿ ಐಷಾರಾಮಿ ಜೀವನ ನಡೆಸಬಹುದಾಗಿತ್ತು, ಆದರೆ ಬಸವಾದಿ ಶರಣರಿಂದ ಪ್ರಭಾವಿತರಾಗಿದ್ದ ಅವರು ವಚನ ಸಾಹಿತ್ಯವನ್ನು ಜಗತ್ಪçಸಿದ್ಧವಾಗಿಸಬೇಕೇಂಬ ಮಹಾತ್ವಾಕಾಂಕ್ಷೆ ಹೊಂದಿದ್ದರು. ತಾಳೆಗರಿಗಳ ರೂಪದಲ್ಲಿದ್ದ ವಚನಗಳನ್ನು ಪರಿಶೋಧಿಸಿ ವಚನಶಾಸ್ತçಸಾರ ಗ್ರಂಥವನ್ನು ಪ್ರಕಟಿಸಿದಾಗ ವಚನ ಸಾಹಿತ್ಯದ ಮೌಲ್ಯಗಳು ಎಲ್ಲೆಡೆ ಪಸರಿಸಿದವು. ಮುಂದೆ ಅನೇಕ ಭಾಷೆಗಳಿಗೆ ವಚನ ಸಾಹಿತ್ಯ ತರ್ಜುಮೆಗೊಂಡಿತು, ವಚನ ಸಂಶೋಧನೆ ಕಾರ್ಯದಲ್ಲಿ ವಯಕ್ತಿಕವಾಗಿ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ ಹಳಕಟ್ಟಿಯವರ ಕೊಡುಗೆಯನ್ನು ಬಸವಾದಿ ಶರಣರ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಸರ್ಕಾರ ಅವರ ಜಯಂತಿಯನ್ನು ವಚನ ಸಂಶೋಧನಾ ದಿನವನ್ನಾಗಿ ಆಚರಿಸುತ್ತಿರುವುದು ಅಭಿನಂದನೀಯ ಎಂದರು.
ಶರಣ ಎಂ.ಬಿ ಲಿಂಗದಾಳ ಪ್ರವಚನ ಪಿತಾಮಹರೆಂದೇ ಖ್ಯಾತರಾದ ಲಿಂಗಾನAದ ಮಹಾಸ್ವಾಮಿಗಳ ಕುರಿತು ಉಪನ್ಯಾಸ ನೀಡಿದರು. ಬಸವದಳದ ಅಧ್ಯಕ್ಷರಾದ ವಿ.ಕೆ ಕರೇಗೌಡ್ರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಎಸ್.ಎನ್ ಹಕಾರಿ ಅತಿಥಿಗಳಾಗಿ ಭಾಗವಹಿಸಿದ್ದರು. ಗಂಗಮ್ಮ ಹೂಗಾರ ವಚನ ಪ್ರಾರ್ಥನೆ ನೆರವೇರಿಸಿದರು. ಎಸ್.ಎ ಮುಗದ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರೆ ಗೌರಕ್ಕ ಬಡಿಗಣ್ಣವರ ವಂದಿಸಿದರು. ಗಿರಿಜಕ್ಕ ಧರ್ಮರಡ್ಡಿ, ನಾಗರತ್ನ ಅಸುಂಡಿ, ಎನ್.ಎಚ್ ಹಿರೇಸಕ್ಕರಗೌಡ್ರ ಸಹನಾ ಆಲತಗಿ, ಸಂಜೀವಿನಿ ಬಡ್ಡಿವಡ್ಡರ, ಶಿಲ್ಪಾ ಬಡಿಗಣ್ಣವರ, ಶಿವಾನಂದ ಹೊಂಬಳ, ಎಸ್.ಬಿ ಮೆಣಸಗಿ, ಬಿ.ವಿ ಕಾಮಣ್ಣವರ, ಸಿದ್ಧಲಿಂಗೇಶ ಹಂಚಿನಾಳ, ಎಸ್.ಎ ಪಾಟೀಲ, ಮೋಹನ ಕಾಡಪ್ಪನವರ, ಈರಣ್ಣ ಬಡಿಗಣ್ಣವರ, ಶರಣು ಅಂಗಡಿ, ಮಂಜುನಾಥ ಅಸುಂಡಿ, ಕುಮಾರಸ್ವಾಮಿ ಹಿರೇಮಠ ಮುಂತಾದವರು ಭಾಗವಹಿಸಿದ್ದರು.