ಜಿಲ್ಲೆ

ಏ.30ರಂದು ಮಳವಳ್ಳಿಯಲ್ಲಿ ಬಸವ ಜಯಂತಿ: ಬಸವ ಕೇಂದ್ರದ ಅಧ್ಯಕ್ಷ ಬಸವಪ್ರಿಯ ನಾಗರಾಜು ಮಾಹಿತಿ

ಮಂಡ್ಯ: ಮಳವಳ್ಳಿ ತಾಲೂಕಿನ ಬಸವ ಕೇಂದ್ರದಲ್ಲಿ ಏ.30ರಂದು ಹಲವು ಸಂಘಟನೆಗಳ ಸಹಕಾರದೊಂದಿಗೆ ಬಸವ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಬಸವಪ್ರಿಯ ನಾಗರಾಜು ತಿಳಿಸಿದರು.

ಮಳವಳ್ಳಿ ತಾಲೂಕು ಪಂಚಾಯಿತಿ ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ವಾದ್ಯಗೋಷ್ಠಿ, ವೀರಗಾಸೆಯೊಂದಿಗೆ ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗುವುದು. ಬಸವ ಕೇಂದ್ರದ ಪದಾಧಿಕಾರಿಗಳಾದ ಆನಂದ್, ಎಚ್.ಹೊನ್ನಪ್ಪ, ಸೋಮೇಶ್, ನಂಜುಂಡಸ್ವಾಮಿ, ಸುರೇಶ್ ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಕಛೇರಿ ಎದುರು ಬಸವೇಶ್ವರರ ಪುತ್ತಳಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಅಂತೆಯೇ ಬಸವ ಜಯಂತ್ಯುತ್ಸವದ ದಿನ ಜಿಲ್ಲಾದ್ಯಂತ ಮಾಂಸದಂಗಡಿ ಬಾಗಿಲು ಮುಚ್ಚಲು ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಬಸವ ಕೇಂದ್ರದ ವಿಜಯಮಹಲಿಂಗು, ಎನ್.ಮಹೇಶ್, ಚಂದ್ರಶೇಖರ್ ಇದ್ದರು.