ಜಿಲ್ಲೆ

ಯುಗಾದಿಯಂದು ಬಸವಕಲ್ಯಾಣ ಉತ್ಸವ

ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಮಾಹಿತಿ


ಬಸವಕಲ್ಯಾಣ: ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ, ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ, ಅಂತಾರಾಷ್ಟಿçÃಯ ಲಿಂಗಾಯತ ಧರ್ಮ ಕೇಂದ್ರ, ಬಸವ ಧರ್ಮ ಪೀಠ ಹಾಗೂ ಎಲ್ಲಾ ಶರಣ ಸಮುದಾಯ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಬಿಕೆಡಿಬಿ ಸಭಾಭವನದಲ್ಲಿ ಏ.೯ರಂದು ಯುಗಾದಿಯ ದಿನ ಬಸವಕಲ್ಯಾಣ ಉತ್ಸವ ಆಯೋಜಿಸಲಾಗಿದೆ ಎಂದು ಸಂಯೋಜಕ ಬಸವರಾಜ ಪಾಟೀಲ್ ಸೇಡಂ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೭ಕ್ಕೆ ಪರುಷ ಕಟ್ಟೆಯಲ್ಲಿ ಸಾಮೂಹಿಕ ವಚನ ಪಠಣ, ಶ್ರೀ ಬಸವೇಶ್ವರ ದೇವಸ್ಥಾನದಿಂದ ಅಲ್ಲಮಪ್ರಭುದೇವರ ಗದ್ದುಗೆ ಮಠದವರೆಗೆ ಅಲ್ಲಮ್‌ಪ್ರಭು ದೇವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಂಜೆ ಬಿಕೆಡಿಬಿ ಸಭಾಭವನದಲ್ಲಿ ಶರಣು ಶರಣಾರ್ಥಿ ಕುರಿತು ವಿಶೇಷ ಉಪನ್ಯಾಸ ಹಾಗೂ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ವಿವಿಧ ಸ್ಫರ್ಧೆಗಳು: ಉತ್ಸವದ ನಿಮಿತ್ತ ೭ ಮತ್ತು ೮ರಂದು ಸಭಾಭವನದ ಆವರಣದಲ್ಲಿ ವಚನ ಕಂಠಪಾಠ, ಶರಣರ ಕುರಿತಾದ ರಸಪ್ರಶ್ನೆ ಸ್ಪರ್ಧೆ, ಬೈಠಕ ಹಾಗೂ ಸೂರ್ಯ ನಮಸ್ಕಾರ ಸ್ಪರ್ಧೆಗಳು ನಡೆಯಲಿವೆ. ೯ರಂದು ಸಂಜೆ ೪.೩೦ಕ್ಕೆ ಸಭಾ ಭವನದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರದವರಿಗೆ ಅಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ಪ್ರಮಾಣ ಪತ್ರ ವಿತರಿಸಲಾಗುವುದು.

೮ರಂದು ಸಂಜೆ ೬ಕ್ಕೆ ನಗರದ ಅಲ್ಲಮ್‌ಪ್ರಭು ದೇವರ ಗದ್ದುಗೆ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಯೋಗ ಹಾಗೂ ಅನುಭಾವ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಬಸವರಾಜ ಪಾಟೀಲ್ ಸೇಡಂ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ.ಮಹೇಶ ಪಾಟೀಲ್- ೯೦೦೮೪೨೮೯೦೨, ರೇಣುಕಾ ಹೋಗ್ತಾಪುg - ೯೯೧೬೧೪೪೧೪೫, ಸುನೀಲ ಭಾಲ್ಕೆ - ೯೭೪೧೩೯೬೭೬೩ ಅವರನ್ನು ಸಂಪರ್ಕಿಸಬಹುದು.