ಮಂಡ್ಯ: ಪ್ರತಿಯೊಬ್ಬರು ಬದುಕಿನ ರೀತಿ ಮತ್ತು ನೀತಿಗಳನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಯನ್ನು ಮಾಡಲಾಗಿದೆ ಎಂದು ಕೆ.ಆರ್.ನಗರ ತಾಲೂಕು ಗುರುಮಲ್ಲೇಶ್ವರ ದಾಸೋಹ ಮಠದ ಜಯದೇವ ತಾಯಿ ಮಾತಾಜಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಿದ್ದ ಮನೆಮನೆಗೆ ಸೌಹಾದರ್ ಬಸವಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನೆ ಹಾಗೂ ಮನಗಳಲ್ಲಿ ದೀಪಗಳನ್ನು ಬೆಳಗುವ ಮೂಲಕ ಕತ್ತಲೆಯನ್ನು ಹೊಗಲಾಡಿಸಬೇಕು. ಆದ್ದರಿಂದ ಮನೆಮನೆಗೆ ಸೌಹಾರ್ದ ಕಾರ್ಯಕ್ರಮ ಬೆಳಕನ್ನು ನೀಡುವಂತ ವಿಶೇಷ ಹಾಗೂ ಅರ್ಥಪೂರ್ಣವಾಗಿದೆ. ಸತತವಾಗಿ 127ನೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ ಎಂದು ಹೇಳಿದರು.
ಮಾಡಬೇಕು, ಮಾಡದಂತಿರಬೇಕು, ಮಾಡುವ ಮಾಟದೊಳಗೆ ತಾನು ಇಲ್ಲದಂತಿರಬೇಕು. ಆ ರೀತಿಯಾಗಿ ಈ ಕಾರ್ಯಕ್ರಮವನ್ನು ಆಯೋಜಕರು ತುಂಬಾ ಜವಾಬ್ದಾರಿಯಿಂದ ಮಾಡಿದ್ದಾರೆ. ನಮ್ಮ ಜನರು ಸಂಸ್ಕಾರವಂತರಾಗಬೇಕು. ಅದರ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಲ್ಲಿಕಾರ್ಜುನ್, ಆರ್‌ಎಸ್‌ಎಸ್ ಮುಖಂಡ ಅವಿನಾಶ್, ಸಂಘದ ಉಪಾಧ್ಯಕ್ಷ ದ್ಯಾವಣ್ಣ, ನಿರ್ದೇಶಕ ಎಚ್.ಸಿ.ಶಿವಕುಮಾರ್, ಮುಖಂಡರಾದ ದೇವರಾಜು, ಸಿದ್ದರಾಜು, ಡಿ.ಎಂ.ಜಗದೀಶ್ ಹಾಜರಿದ್ದರು.