ಜಿಲ್ಲೆ

ಅಜ್ಞಾನ ದೂರ ಮಾಡುವ ಜ್ಯೋತಿ: ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ ಅಭಿಮತ

reportermys
ಮಂಡ್ಯ: ದೀಪವನ್ನು ಹಚ್ಚಿ ದೇವರನ್ನು ನೋಡುತ್ತೇವೆ. ಪೂಜೆಗೆ ಮೊದಲು ಮನೆಯಲ್ಲಿ ದೀಪವನ್ನು ಪೂಜೆ ಮಾಡುತ್ತೇವೆ. ಹಾಗಾಗೀ ಜ್ಯೋತಿ ಎಂದರೆ ನಮ್ಮ ಬಾಳಲ್ಲಿ ಇರುವ ಅಜ್ಞಾನ, ಅಂಧಕಾರ, ಮೌಡ್ಯಗಳನ್ನು ದೂರ ಮಾಡುವ ಸಾಂಕೇತವಾಗಿದೆ ಎಂದು ಟಿ.ನರಸೀಪುರ ತಾಲೂಕು ಮುಡುಕನಪುರ ಮಠದ ಷಡಕ್ಷರಿ ದೇಶೀಕೆಂದ್ರ ಸ್ವಾಮೀಜಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಿದ್ದ ಮನೆಮನೆಗೆ ಸೌಹಾರ್ಧ ಬಸವ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಹಾಗೇ ನಾವೆಲ್ಲರು ಬೆಳಕಿನ ಜತೆ ನಮ್ಮನ ನಾವು ಗುರುತಿಸಿಕೊಂಡರೆ ನಮ್ಮಲ್ಲೂ ಕೂಡ ಒಂದು ದಿವಸ ಜ್ಯೋತಿ ಎಂಬುದು ನಮ್ಮ ಹೃದಯಕ್ಕೆ ಅರಿವಿನ ಬೆಳಕ್ಕಾಗಿ ಜ್ಯೋತಿಯಾಗಿ ಬೆಳಗುತ್ತದೆ ಎಂಬ ಸುಂದರ ಆಲೋಚನೆಯನ್ನು ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಸ್‌.ನಾಗರಾಜು, ಟಿ.ನರಸೀಪುರ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಕುಮಾರಸ್ವಾಮಿ, ಸಿ.ಎಂ.ಪುಟ್ಟಬುದ್ಧಿ, ಜಗದೀಶ್‌ ಹಾಜರಿದ್ದರು.