ಬಸವ ಜಯಂತಿಯಲ್ಲಿ 50 ವಚನಗಳ ಕಿರುಪುಸ್ತಕ ಬಿಡುಗಡೆ /ಸಮಿತಿ ಅಧ್ಯಕ್ಷ ಎಂ.ವೈ.ಪಾಟೀಲ್ ಮಾಹಿತಿ |
ವಿಜಯವಾಣಿ ಸುದ್ದಿಜಾಲ ಕಲಬುರಗಿ
ವೀರಶೈವ-ಲಿಂಗಾಯತ ಸಮುದಾಯದ ಎಲ್ಲರೂ ಸಂಘಟಿತರಾಗಿ ಏ.30ರಂದು ಜಗತ್ ವೃತ್ತದಲ್ಲಿ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷರೂ ಆದ ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಹಲವು ಆಯಾಮಗಳಲ್ಲಿ ಜಯಂತಿ ಆಚರಿಸಲಾಗುತ್ತಿದೆ. 29ರಂದು ಸಂಜೆ 5ಕ್ಕೆ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯಲಿರುವ ಬೃಹತ್ ಬಹಿರಂಗ ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಬಸವಾದಿ ಶರಣ ಸಂಘಟನೆ ಮುಖಂಡರು, ಬಸವಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. 30ರಂದು ಸಂಜೆ 4ಕ್ಕೆ ನೆಹರು ಗಂಜ್ ನಗರೇಶ್ವರ ಶಾಲೆಯಿಂದ ಜಗತ್ವರೆಗೆ ಬೃಹತ್ ಮೆರವಣಿಗೆ ಬಳಿಕ ಜಯಂತಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೂ ಮೊದಲು ಅರ್ಥಪೂರ್ಣ ಹಾಗೂ ಅದ್ದೂರಿ ಜಯಂತಿ ಆಚರಣೆ ಭಾಗವಾಗಿ 28ರಂದು ಬೃಹತ್ ಕಾರು ರ್ಯಾಲಿ, 29ಕ್ಕೆ ಮಹಿಳಾ ಬೈಕ್ ರ್ಯಾಲಿ ಹಾಗೂ 30ರ ಬೆಳಗ್ಗೆ ಬಸವೇಶ್ವರ ಆಸ್ಪತ್ರೆ ಸಹಯೋಗದಡಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ವೀರಶೈವ-ಲಿಂಗಾಯತರಲ್ಲಿ ಅನೇಕ ಉಪಪಂಗಡಗಳಿದ್ದರೂ ಎಲ್ಲರೂ ಒಂದೇ ವಿಚಾರಧಾರೆಗೆ ಒತ್ತು ಕೊಟ್ಟು ಸಂಘಟಿತರಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ. ನಮ್ಮ ವಿಚಾರ ಬೇರೆ ಬೇರೆಯಾದರೂ ಬಸವತತ್ವ, ಕಾಯಕ ತತ್ವ ಒಂದೇ ಆಗಿದೆ ಎಂಬ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಬಸವ ಜಯಂತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವ-ಲಿಂಗಾಯತ ಸಮಾಜದ ಎಲ್ಲರೂ ಸೇರಿ ಒಗ್ಗಟ್ಟು ಪ್ರದಶರ್ಿಸಬೇಕು. ಧರ್ಮ ಪ್ರಚಾರದಲ್ಲಿ ಕಾಯಕ ನಿಷ್ಠೆ ತೋರಬೇಕು ಎಂದು ಕೋರಿದ ಅವರು, ಮೆರವಣಿಗೆಯಲ್ಲಿ ಸಮಾಜದ ಸಾವಿರಾರು ಮಹಿಳೆಯರಿಂದ ಬೃಹತ್ ಕುಂಭ ಜರುಗಲಿದೆ. 50 ವಚನಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಹಾಗೂ ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದ್ದು, ಹಿರಿಯರಾದ ಡಾ.ಅರವಿಂದ ಜತ್ತಿ ಜತೆ ಚಚರ್ಿಸಲಾಗಿದೆ ಎಂದು ಹೇಳಿದರು.
ಜಯಂತ್ಯುತ್ಸವ ಯಶಸ್ಸಿಗೆ ಆಹಾರ ಸಮಿತಿ, ವೇದಿಕೆ, ಮೆರವಣಿಗೆ ಸೇರಿ ಹಲವು ಸಮಿತಿ ರಚಿಸುತ್ತಿದ್ದು, ಪ್ರತಿಯೊಂದು ಸಮಿತಿ ತನಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲಿದೆ. ಬಸವಾದಿ ಶರಣರ ತತ್ವಗಳ ಕುರಿತು ಪರಿಣತ ವಿಷಯ ತಜ್ಞರನ್ನು ಜಯಂತ್ಯುತ್ಸವದ ಮುಖ್ಯ ಭಾಷಣಕಾರರನ್ನಾಗಿ ಆಮಂತ್ರಿಸಲಾಗುವುದು. ಈ ಬಗ್ಗೆ ಎಲ್ಲ ಹಿರಿಯರು ಹಾಗೂ ವಿಷಯ ತಜ್ಞರೊಂದಿಗೆ ಚಚರ್ಿಸಿ ಅಂತಿಮ ನಿಧರ್ಾರ ಕೈಗೊಳ್ಳಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು. ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಬಸವರಾಜ ದೇಶಮುಖ, ಪ್ರಮುಖರಾದ ಅರುಣಕುಮಾರ ಪಾಟೀಲ್, ಪ್ರಭುಲಿಂಗ ಮಹಾಗಾಂವಕರ್, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಪ್ರೊ.ಆರ್.ಕೆ. ಹುಡಗಿ, ಶ್ರೀಶೈಲ ಘೂಳಿ, ಸುರೇಶ ಸಜ್ಜನ್, ಕಲ್ಯಾಣರಾವ ಪಾಟೀಲ್, ಅಶೋಕ ಘೂಳಿ, ಸಂಗಮೇಶ ನಾಗನಹಳ್ಳಿ, ಶರಣು ಭೂಸನೂರ, ಪ್ರವೀಣ ಪಾಟೀಲ್ ಹರವಾಳ, ಸೋಮಶೇಖರ ಹಿರೇಮಠ, ಭೀಮಾಶಂಕರ ಮಿಟ್ಟೇಕಾರ, ಉದಯ ಪಾಟೀಲ್, ಡಾ.ಶಂಭುಲಿಂಗ ಬಳಬಟ್ಟಿ, ಶರಣು ಟೆಂಗಳಿ, ಚೆನ್ನು ದಿಗ್ಗಾವಿ, ಡಾ.ಕಿರಣ ದೇಶಮುಖ, ಶರಣು ಭೂಸನೂರ, ಈರಣ್ಣ ಗುಳೇದ ಇತರರಿದ್ದರು.
16ರಿಂದ ತಾಲೂಕು ಮಟ್ಟದ ಕಾರ್ಯಕ್ರಮ
ಶರಣ ಸಂಸ್ಕೃತಿ ಮತ್ತು ಶರಣ ಸಂಪ್ರದಾಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಏ.16ರಂದು ಆಳಂದ, ಅ-ಜಲಪುರ ಮತ್ತು ಜೇವಗರ್ಿ ಹಾಗೂ 17ರಂದು ಚಿತ್ತಾಪುರ, ಸೇಡಂ ಚಿಂಚೋಳಿಗಳಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಜರುಗಲಿವೆ. ಮಹಾನಗರ ಪಾಲಿಕೆಯ ಎಲ್ಲ 51 ವಾಡರ್್ಗಳಲ್ಲೂ ಜಯಂತಿ ಆಚರಣೆ ಸಿದ್ಧತೆ ಕುರಿತ ಸಭೆ ನಡೆಸಲಾಗುವುದು. ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಈ ಸಭೆಗಳು ಜರುಗಲಿವೆ ಎಂದು ಎಂ.ವೈ. ಪಾಟೀಲ್ ತಿಳಿಸಿದರು.
ಬಸವ ಜಯಂತ್ಯುತ್ಸವಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಿರಲು ತೀಮರ್ಾನಿಸಲಾಗಿದೆ. ವೀರಶೈವ-ಲಿಂಗಾಯತ ಸಮಾಜದ ಸ್ಥಿತಿವಂತರು ಸ್ವಇಚ್ಛೆಯಿಂದ ಜಯಂತಿ ಯಶಸ್ಸಿಗಾಗಿ ದೇಣಿಗೆ ನೀಡಬಹುದು. ಎಲ್ಲರೂ ಸಂಘಟಿತರಾಗಿ ಜಯಂತ್ಯುತ್ಸವ ಯಶಸ್ವಿಯಾಗಿ ನಡೆಸಲು ನಿರ್ಧರಿಸಲಾಗಿದೆ.
| ಎಂ.ವೈ.ಪಾಟೀಲ್
ಜಿಲ್ಲಾಧ್ಯಕ್ಷ, ಬಸವ ಜಯಂತ್ಯುತ್ಸವ ಸಮಿತಿ
ಒಳಪಂಗಡ ಎಂಬ ಭಾವಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಬಸವ ಜಯಂತಿ ಆಚರಿಸುರುವುದು ಸಂತಸದ ವಿಚಾರ. ಬಸವಾದಿ ಶರಣರ ವಚನ ಸಾಹಿತ್ಯ ಭವಿಷ್ಯದ ಪೀಳಿಗೆಗೆ ತಲುಪಿಸುವುದರ ಜತೆಗೆ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಕಂಡುಕೊಳ್ಳುವ ಸಂದೇಶ ಈ ಮೂಲಕ ಸಾರಲಾಗುತ್ತಿದೆ.
| ಡಾ.ಶರಣಪ್ರಕಾಶ ಪಾಟೀಲ್
ವೈದ್ಯಕೀಯ ಶಿಕ್ಷಣ ಸಚಿವ