ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀ ಉಳವಿ ಚನ್ನಬಸವೇಶ್ವರ ಧರ್ಮ ಂಡ ಸಂಸ್ಥೆ ವತಿಯಿಂದ ಮೇ 10ರಂದು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 7.15ಕ್ಕೆ ಶ್ರೀ ಚನ್ನಬಸವಣ್ಣನವರಿಗೆ ರುದ್ರಾಭಿಷೇಕ ಹಾಗೂ ಎಲೆ ಪೂಜೆ ನೆರವೇರಿಸಿ ಷಟಸ್ಥಲ ಧ್ವಜಾರೋಹಣ ಜರುಗಲಿದೆ. ನಂತರ ಬಸವಣ್ಣನವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಭವ್ಯ ಮಂಟಪದ ಮೂಲಕ ಜೋಡೆತ್ತುಗಳ ಹಾಗೂ ಬಸವ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಹೊರಡಲಿದೆ.
ಬೆಳಗ್ಗೆ 8 ಗಂಟೆಗೆ ಚನ್ನಬಸವಣ್ಣನವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ರೈಲ್ವೆ ಸ್ಟೇಶನ್ ರಸ್ತೆ, ಮಹಿಷಿ ರಸ್ತೆ, ಬಾಗಲಕೋಟ ಪೆಟ್ರೋಲ್ ಪಂಪ್, ಹೊಸಯಲ್ಲಾಪುರ ರಸ್ತೆ, ಕಾಮನಕಟ್ಟಿ, ನಗರೇಶ್ವರ ದೇವಸ್ಥಾನ, ಹೆಬ್ಬಳ್ಳಿ ಅಗಸಿ, ಶಿವಾಜಿ ರಸ್ತೆ, ಗಾಂಧಿಚೌಕ್, ಕೆಸಿಸಿ ಬ್ಯಾಂಕ್ ರಸ್ತೆ, ಸುಭಾಷ ರಸ್ತೆ, ಕೋರ್ಟ್ ವೃತ್ತ ಮಾರ್ಗವಾಗಿ ಮರಳಿ ದೇವಸ್ಥಾನ ತಲುಪಲಿದೆ. ಮೆರವಣಿಗೆಯಲ್ಲಿ ಕರಡಿ ಮಜಲು, ಡೊಳ್ಳು, ಜಗ್ಗಲಗಿ, ಭಜನಾ ಮೇಳ, ವಾದ್ಯ ಮೇಳ, ಕಲಾ ತಂಡ ಸೇರಿ ವಿವಿಧ ವೇಷ ಭೂಷಣದ ಕಲಾವಿದರು ಭಾಗವಹಿಸುವರು. ನಂತರ ದೇವಸ್ಥಾನದಲ್ಲಿ ಮಹಾಪ್ರಸಾದ ನೆರವೇರಲಿದೆ ಎಂದು ಉಳವಿ ಚನ್ನಬಸವೇಶ್ವರ ಧರ್ಮ ಂಡ ಸಂಸ್ಥೆ ಗೌರ ಕಾರ್ಯದಶಿರ್ ರಾಮಣ್ಣ ಸುಳ್ಳದ ತಿಳಿಸಿದ್ದಾರೆ.