ಹುಬ್ಬಳ್ಳಿ : ರಾಷ್ಟ್ರೀಯ ಬಸವದಳ ಹುಬ್ಬಳ್ಳಿ ಘಟಕದ ವತಿಯಿಂದ ಇಲ್ಲಿನ ಉಣಕಲ್ಲನ ಬಸವ ಮಂಟಪದಲ್ಲಿ ಶುಕ್ರವಾರದಂದು ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿ ಆಚರಿಸಲಾಯಿತು.
ಬೆಳಗ್ಗೆ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶರಣೆ ಶೋಭಾದೇವಿ ಪರಮಾದಿ, ಅನ್ನಪೂರ್ಣ ಕುಬಸದ, ಶ್ರೀದೇವಿ ಸುನೀಲ ಪಾಟೀಲ, ಶಂಕ್ರಮ್ಮ ಜವಳಿ ಮತ್ತಿತರರು ನಡೆಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಸವಾದಿ ಶರಣರ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುವುದು ಎಂದರು.
ಹಿರೇಹೊನ್ನಳ್ಳಿಯ ರಾಷ್ಟ್ರೀಯ ಬಸವದ ಬಸವ ದಳದ ರಾಮಣ್ಣ ಕೋಟಿ, ಶಿವಲಿಂಗಪ್ಪ ಯಲಿವಾಳ ಹಾಗೂ ಗೀತಾ ತಡಸದ ಮಾತನಾಡಿ, ಇಷ್ಟಲಿಂಗ ಯೋಗದ ವೈಜ್ಞಾನಿಕತೆ ಬಗ್ಗೆ ತಿಳಿಹೇಳಿದರು.
ಕಲ್ಯಾಣಪ್ಪ ಪರಮಾಧಿ, ಲಿಂಗರಾಜ ದೇಟಿನ್, ಸುನೀಲ ಪಾಟೀಲ, ಸಿದ್ದಲಿಂಗೇಶ ಜವಳಿ, ನಾಗೇಶ ಕುರುಡಿಕೇರಿ, ವಿನಯ ಪರಮಾದಿ, ಗುರುಸಿದ್ದಪ್ಪ ಶಿವಶಿಂಪಿ, ಚಂದ್ರಕಾಂತ ಜೀವರ್ಗಿ, ಈರಣ್ಣ ಅಂಗಡಿ, ಚನ್ನಪ್ಪ ಯಳವತ್ತಿ ಹಾಗೂ ಇತರರು ಭಾಗವಹಿಸಿದ್ದರು.