ವಿಜಯಪುರ: ಮಹಾತ್ಮ ಬಸವಣ್ಣ ಸಮಾನತೆಯ ಹರಿಕಾರ. ತಮ್ಮ ವಚನಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕ. ದಯವೇ ಧರ್ಮದ ಮೂಲ ಎಂದು ಸಾರಿದ ಮಹಾತ್ಮ ಬಸವೇಶ್ವರರ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಳ್ಳೋಣ ಎದು ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುಧವಾರ ನಡೆದ ಮಹಾತ್ಮ ಬಸವೇಶ್ವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಮ್ಮ ಶರಣರ ವಚನಗಳಲ್ಲಿದೆ. ಶರಣರ ಆಶಯಗಳನ್ನು ಅರಿಯೋಣ ಎಂದರು.
ಕಸಾಪ ಪದಾಧಿಕಾರಿ ಕಮಲಾ ಮುರಾಳ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಕಲ್ಯಾಣಪ್ಪಗೋಳ ಉಪನ್ಯಾಸ ನೀಡಿದರು.
ಶ್ರೀಧರ ಹೆಗಡೆ, ಎಲ್.ಬಿ. ಶೇಖ, ಸುನಂದಾ ಕೋರಿ, ಸುರೇಖಾ ರಾಠೋಡ, ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಲಲಿತಕಲಾ ಆಕಾಡೆಮಿ ಸದಸ್ಯೆ ರಾಜೇಶ್ವರಿ ಮೋಪಗಾರ, ರಾಜೇಸಾಬ ಶಿವನಗುತ್ತಿ, ಡಾ.ಶೈಲಾ ಬಳಗಾನೂರ, ಎಂ.ಬಿ. ಮೋಪಗಾರ, ಮಹಿಬೂಬಸಾಬ ಕೊಲ್ಹಾರ, ಡಾ. ಸುರೇಶ ಕಾಗಲಕರೆಡ್ಡಿ, ವಿಶ್ರಾಂತ ಪ್ರಾಚಾರ್ಯ ಎಸ್.ಎಂ. ಶೇಖ, ರಾಮನಗೌಡ ದಾನಿ, ಸರ್ವಾನಂದ ಕೂಬರಡ್ಡಿ, ಮಹಾದೇವಪ್ಪ ಹಾವನ್ನವರ, ರಾಮಗೊಂಡ ದಾನಿ ಮತ್ತಿತರರಿದ್ದರು.
ಮನಗೂಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಡಿ. ಮೇತ್ರಿ ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಮಾಧವ ಗುಡಿ ಸ್ವಾಗತಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರವೀನ ಶೇಖ ವಂದಿಸಿದರು.