ಜಿಲ್ಲೆ

ವೆಂಕಟೇಶ ಕಾಟವೆಗೆ ಬಸವ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಅಖಿಲ ಕರ್ನಾಟಕ ಬಸವ ಬಳಗದ 21ನೇ ವಾರ್ಷಿಕೋತ್ಸವ ಮತ್ತು ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ವೈದ್ಯರು ಮತ್ತು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ನಗರದಲ್ಲಿ ಬಸವ ಪ್ರಶಸ್ತಿ ಪ್ರದಾನ ಸಮಾರಂಭವು ಸೋಮವಾರ ಏರ್ಪಾಟಾಗಿತ್ತು.
ಕಾಂಗ್ರೆಸ್ ಮುಖಂಡ ಡಾ. ಶರಣಪ್ಪ ಕೊಟಗಿ, ಉದ್ಯಮಿ ಡಾ. ರಮೇಶ ಮಹಾದೇವಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾಜಮುಖಿ ಕೆಲಸ ಮಾಡಿದ್ದನ್ನು ಪರಿಗಣಿಸಿ ವಿಎಕೆ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಕಾಟವೆ ಅವರಿಗೆ ಬಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತುಸಾ ಕಲ್ಬುರ್ಗಿ, ಸಂಚಾಲಕರಾದ ಅಮಿತ ಮಹಾಜನ, ಶಂಕರ ಮಿಸ್ಕಿನ್, ಪ್ರಮುಖರಾದ ಎಸ್.ಎಸ್. ಮಿಟಳಕೋಡ, ಮಲ್ಲಿಕಾರ್ಜುನ ಸಾವಕಾರ, ಡಾ. ಪ್ರಕಾಶ ಜೋಶಿ, ಡಾ.ಎಂ.ಆರ್. ಪಾಟೀಲ, ಸಂತೋಷ ರತ್ನಾಕರ ವೆರ್ಣೇಕರ, ಡಾ. ಸಂದೀಪ ಕುಲಕರ್ಣಿ, ಮಾರುತಿ ಬೀಳಗಿ, ಡಾ.ಪ್ರೇಮಾ ಪ್ರಕಾಶ ಗಿರಿಮಶೆಟ್ಟಿ ಇತರರಿದ್ದರು.