ಜಿಲ್ಲೆ

ದೈವ ಸ್ವರೂಪಿ ಬಸವ ಮೃತ

ಎ. ಆರ್. ರಘುರಾಮ

ಮಹದೇಶ್ವರಬೆಟ್ಟ : ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರು ಹಾಗೂ ಗ್ರಾಮಸ್ಥರಿಗೆ ಪ್ರೀತಿ ಪಾತ್ರವಾಗಿದ್ದ (ಕಮಲಮ್ಮನ ಗೂಳಿ) ದೈವ ಸ್ವರೂಪಿ ಬಸವ ಸೋಮವಾರ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮ.ಬೆಟ್ಟದ ಮಾದಪ್ಪನ ಸನ್ನಿಧಿ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದ 2005-06ನೇ ಸಾಲಿನಲ್ಲಿ ಅಂದಿನ ಕಾರ್ಯನಿರ್ವಾಹಕ ಅಧಿಕಾರಿ ಕಮಲಮ್ಮ ಎಂಬವರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಬಸವನನ್ನು ನೀಡಿದ್ದರು. ಕಾಲಾನಂತರದಲ್ಲಿ ಗ್ರಾಮಸ್ಥರು ಹಾಗೂ ಭಕ್ತರೊಂದಿಗೆ ಹೊಂದಿಕೊಂಡಿದ್ದ ಈ ಬಸವ ಎಲ್ಲರಿಗೂ ಪ್ರೀತಿ ಪಾತ್ರವಾಗಿತ್ತು . ಸುಮಾರು 30 ವರ್ಷದ ಬಸವ ಶಂಕಮ್ಮ ನಿಲಯದ ಸಮೀಪ ಮೃತಪಟ್ಟಿದ್ದು, ಬೇಡಗಂಪಣ ಅರ್ಚಕರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭ ಬೇಡಗಂಪಣ ಅರ್ಚಕರಾದ ಚೇಳಮಾದ ತಂಬಡಿ, ಸುರೇಶ್, ಬಸವರಾಜು, ರಾಜು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರಾದ ರಾಜ, ನಾಗರಾಜು, ಗೋಪಾಲ್, ಕೆ. ನಾಗರಾಜು ಇದ್ದರು.