ಕಲಬುರಗಿ: ಮಾನವ ತನ್ನ ಜೀವನದಲ್ಲಿ ಕೈಗೊಳ್ಳುವ ಕಾಯಕವು ಅವನ ನಿಜ ಸ್ವರೂಪ ಪ್ರತಿಬಿಂಬಿಸುತ್ತದೆ. ಕಾಲ&ರ‍್ಮ, ತನು&ಮನ&ಭಾವಗಳ ಶುದ್ಧತೆ, ತ್ರಿಕರಣ ಶುದ್ಧಿ ಹಾಗೂ ಪಂಚತತ್ವಗಳ ಒಗ್ಗಟ್ಟು ಸೇರಿ ಒಟ್ಟು ೩೬ ತತ್ವಗಳನ್ನು ಒಳಗೊಂಡ ತತ್ವಶಾಸವೇ ಮನುಷ್ಯನ ನಿಜವಾದ ಮರ‍್ಗ ಎಂದು ಬೆಳಗಾವಿ ಜಿಲ್ಲೆಯ ಬಸವ ಬೆಳವಿಯ ಚಿರಂತೇಶ್ವರ ವಿರಕ್ತ ಮಠದ ಪೂಜ್ಯ ಶ್ರೀ ಶರಣಬಸವ ಸ್ವಾಮಿಗಳು ಹೇಳಿದರು.
ಕಲಬುರಗಿ ಜಯನಗರದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಆಶಾಢ ಮಾಸದ ವಚನ ಪ್ರವಚನ ಕರ‍್ಯಕ್ರಮದ ಮೂರನೆ ದಿನದಂದು ಪ್ರವಚನ ನೀಡಿದರು.
ಜಾತಿ, ಮತ, ಪಂಥ ಎಲ್ಲಕ್ಕೂ ಮೀರಿದ ತತ್ವವೇ ಶರಣ ತತ್ವ. ಇದು ಎಲ್ಲರಿಗೂ ಸಮಾನತೆ ಸೂಚಿಸುವ ಔಷಧ. ಈ ತತ್ವ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ವಿವರಿಸಿದರು.
ಕಲಬುರಗಿ ಬಸವ ಸಮಿತಿ ಅಧ್ಯೆ ಡಾ.ವಿಲಾಸವತಿ ಖೂಬಾ ಅಧ್ಯತೆಯಲ್ಲಿ ಕರ‍್ಯಕ್ರಮ ನಡೆಯಿತು. ಮಹಾನ್ ದರ‍್ಶನಿಕ ಬಸವಣ್ಣ ಎಂಬ ವಿಷಯ ಕುರಿತು ನಡೆದ ಈ ವಿಶೇಷ ಕರ‍್ಯಕ್ರಮದಲ್ಲಿ ಸಮಿತಿ ಕರ‍್ಯರ‍್ಶಿ ಡಾ.ಆನಂದ ಸಿದ್ದಾಮಣಿ, ಡಾ.ಜಯಶ್ರೀ ದಂಡೆ, ಪತ್ರರ‍್ತ ಶರಣಗೌಡ ಪಾಟೀಲ ಪಾಳಾ, ಬಂಡೆಪ್ಪ ಕೇಸೂರ (ಹಾಗರಗಿ), ಶಾಂತಲಿಂಗ ಪಾಟೀಲ (ಕೋಳಕೂರ), ಸೋಮಶೇಖರ ಮಾಲಿಪಾಟೀಲ (ತೇಗಲತಿಪ್ಪಿ), ಬಸವರಾಜ ಮರಬದ, ಬಸವರಾಜ ವಾಲಿ, ಅಖಂಡಯ್ಯ ಸ್ವಾಮಿ, ಜಯಶ್ರೀ ಚಟ್ನಳ್ಳಿ ಇತರರಿದ್ದರು.